ಬೌಲರ್ ಅಶೋಕ್​ ದಿಂಡಾ ತಲೆಗೆ ಗಾಯ..!

ಕೋಲ್ಕತ್ತಾ: ಪೇಸರ್ ಅಶೋಕ್​ ದಿಂಡಾ ಪ್ರ್ಯಾಕ್ಟೀಸ್​ ಪಂದ್ಯದಲ್ಲಿ ಗಾಯಗೊಂಡಿದ್ದಾರೆ. ನಗರದ ಈಡನ್​​ ಗಾರ್ಡನ್​​ನಲ್ಲಿ  ಮಾಜಿ ಕ್ರಿಕೆಟಿಗ ವಿವಿಎಸ್​ ಲಕ್ಷ್ಮಣ್ ಮಾರ್ಗದರ್ಶನದಲ್ಲಿ ಪ್ರ್ಯಾಕ್ಟೀಸ್ ಮಾಡುತ್ತಿದ್ದ ವೇಳೆ ತಲೆಗೆ ಗಾಯಮಾಡಿಕೊಂಡಿದ್ದಾರೆ. ಮುಸ್ತಾಕ್​ ಅಲಿ ಚಾಂಪಿಯನ್​ಶಿಪ್​ ಟಿ-20 ಪಂದ್ಯಕ್ಕಾಗಿ ಪ್ರ್ಯಾಕ್ಟೀಸ್​ ಮಾಡುತ್ತಿದ್ದ ವೇಳೆ ಘಟನೆ ನಡೆದಿದೆ. ಬೌಲಿಂಗ್ ಮಾಡ್ತಿದ್ದ ದಿಂಡಾ, ಬಿರೇಂದರ್​ ವಿವೇಕ್ ಹೊಡದ ಶಾಟ್​ ಅನ್ನ ಪಿಚ್​​ನಲ್ಲಿಯೇ ಕ್ಯಾಚ್​ ಹಿಡಿಯಲು ಟ್ರೈ ಮಾಡಿದ್ದಾರೆ. ಆದರೆ ಬೌಲ್​ ನೇರವಾಗಿ ತಲೆಗೆ ಹೊಡೆದಿದೆ. ನಂತರ ಪಿಚ್​​ನಲ್ಲಿಯೇ ಕುಸಿದು ಬಿದ್ದ ದಿಂಡಾಗೆ ವೈದ್ಯರು ಬಂದು ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ. ಅಶೋಕ್ ದಿಂಡಾ ಏಟು ಮಾಡಿಕೊಂಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.