ಬೇವಿನ ಕಣ ಕಣದಲ್ಲೂ ಇದೆ ಔಷಧಿಯ ಶಕ್ತಿ

ಪ್ರಾಚೀನ ಕಾಲದಿಂದಲೂ ಬೇವಿಗೆ ತನ್ನದೇ ಆದ ಪ್ರಾಮುಖ್ಯತೆಯಿದೆ. ಚರ್ಮಕ್ಕೆ ಸಂಬಂಧಿಸಿದ ಅನೇಕ ಕಾಯಿಲೆಗಳನ್ನ ಗುಣಪಡಿಸುವಲ್ಲಿ ಬೇವು ಇಂದಿಗೂ ರಾಮಬಾಣ ಪರಿಹಾರವಾಗಿದೆ. ಬೇರಿನಿಂದ ಹಿಡಿದು ಎಲೆಯವರೆಗೂ ಇದರಲ್ಲಿ ಔಷಧೀಯ ಗುಣಗಳಿವೆ.
ಬೇವಿನ ಕ್ಯಾಪ್ಸುಲ್​ಗಳ ಸೇವನೆಯು ನಿಮ್ಮ ರೆಸಿಸ್ಟೆನ್ಸ್​ ಪವರ್​ ಹೆಚ್ಚಿಸಲು ಸಹಾಯ ಮಾಡುತ್ತದೆ. ಮಧುಮೇಹ, ಮೊಡವೆ, ಬ್ಲಡ್​ ಫ್ಯೂರಿಫೈ, ಎಸ್ಜಿಮಾ, ಡರ್ಮಟೈಟಿಸ್, ಸೋಂಕು ಮುಂತಾದವುಗಳಲ್ಲಿ ಬೇವಿ ಕ್ಯಾಪ್ಸೂಲ್​ಗಳು ಸಹಾಯ ಮಾಡುತ್ತದೆ.
ಬೇವಿನ ಉಪಯೋಗಗಳು ಇಲ್ಲಿವೆ

1. ಚರ್ಮ ಮತ್ತು ಕೂದಲು: ಕ್ಲೀನ್​ ಆ್ಯಂಡ್​ ಕ್ಲಿಯರ್​ ಸ್ಕಿನ್​ ಬೇಕು ಅಂತಾ ಪ್ರತಿಯೊಬ್ಬರು ಬಯಸುತ್ತಾರೆ. ಹಾಗೇ ಉದ್ದವಾದ, ದಪ್ಪವಾದ ಕೂದಲು ಅಂದ್ರೆ ಎಲ್ಲಾರಿಗೂ ಇಷ್ಟ. ಬೇವು ಚರ್ಮದ ಸಮಸ್ಯೆಗಳಿಗೆ ಅತ್ಯುತ್ತಮ ಪರಿಹಾರವಾಗಿದೆ. ಬ್ಯಾಕ್ಟೀರಿಯಾ ವಿರೋಧಿ ಮತ್ತು ಶಿಲೀಂಧ್ರ-ವಿರೋಧಿ ಗುಣಲಕ್ಷಣಗಳು ತಲೆಹೊಟ್ಟಿಗೆ ಚಿಕಿತ್ಸೆ ನೀಡುತ್ತದೆ ಮತ್ತು ಕೂದಲು ಉದುರುವುದನ್ನ ತಡೆದು, ದಟ್ಟವಾಗಿ ಬೆಳೆಯಲು ಸಹಾಯ ಮಾಡುತ್ತದೆ.

2. ರಕ್ತ ಶುದ್ಧೀಕರಣ: ಆ್ಯಂಟಿ ಬ್ಯಾಕ್ಟೀರಿಯಾ ಹಾಗೂ ಆ್ಯಂಟಿ ಫಂಗಲ್​ ಗುಣಗಳಿರುವುದರಿಂದ ಇದು ರಕ್ತವನ್ನ ಶುದ್ಧೀಕರಿಸುತ್ತದೆ. ಜೊತೆಗೆ ರಕ್ತದಲ್ಲಿನ ಕಲ್ಮಶಗಳನ್ನ ತೆಗೆದುಹಾಕುತ್ತದೆ. ಕಿಡ್ನಿ ಮತ್ತು ಲಿವರ್​ ಕಾರ್ಯ ನಿರ್ವಹಣೆಗೆ ಅಡ್ಡಿಪಡಿಸುವ ಹಾನಿಕಾರಕ ಜೀವಾಣುಗಳನ್ನು ತೆಗೆದುಹಾಕುತ್ತದೆ, ರಕ್ತದಲ್ಲಿನ ಹೆಚ್ಚಿನ ವಿಷಾಂಶಗಳು ವಿವಿಧ ಅಂಗಗಳ ಕಾರ್ಯನಿರ್ವಹಣೆಯನ್ನ ತಗ್ಗಿಸುತ್ತದೆ. ಅಲರ್ಜಿಗಳು, ಆಯಾಸ, ತಲೆನೋವು ಇತ್ಯಾದಿ ರೋಗಲಕ್ಷಣಗಳನ್ನು ಉಂಟುಮಾಡುತ್ತವೆ. ಆದ್ದರಿಂದ ಒಂದು ಅಥವಾ ಎರಡು ಬೇವಿನ ಕ್ಯಾಪ್ಸುಲ್ ದಿನಕ್ಕೆ ಸೇವಿಸುವುದರಿಂದ ರಕ್ತವನ್ನ ಡಿಟಾಕ್ಸ್​ ಮಾಡಿ ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತದೆ.

3. ರೋಗ ನಿರೋಧಕ ಶಕ್ತಿಯನ್ನ ಹೆಚ್ಚಿಸುತ್ತದೆ: ರೋಗ ನಿರೋಧಕ ಶಕ್ತಿಯನ್ನ ಹೆಚ್ಚಿಸುವ ಮೂಲಕ ಎಲ್ಲಾ ವಿಧದ ಸೋಂಕುಗಳ ವಿರುದ್ಧ ಹೋರಾಡುವ ಶಕ್ತಿಯನ್ನ ನೀಡುತ್ತದೆ. ಜೊತೆಗೆ ಇದು ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಮತ್ತು ಮಧುಮೇಹದಿಂದ ಬಳಲುತ್ತಿರುವ ಜನರಿಗೆ ಬಹಳ ಒಳ್ಳೆಯದು. ಬೇವಿನ ಕ್ಯಾಪ್ಸುಲ್​ಗಳ ನಿಯಮಿತ ಬಳಕೆಯಿಂದ ಅಧಿಕ ಜ್ವರ, ಮಲೇರಿಯಾ, ವೈರಸ್ ಜ್ವರ, ಡೆಂಗ್ಯೂ ಮತ್ತು ಇತರ ಸಾಂಕ್ರಾಮಿಕ ಕಾಯಿಲೆಗಳನ್ನು ತಪ್ಪಿಸಬಹುದು.

4. ಬಾಯಿಯ ಆರೋಗ್ಯ: ಬೇವಿನಲ್ಲಿರುವ ಆ್ಯಂಟಿ ಬ್ಯಾಕ್ಟೀರಿಯಾ ಮತ್ತು ಆ್ಯಂಟಿಫಂಗಸ್​ ಗುಣಗಳು ಹಲ್ಲಿಗೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ಪರಿಹರಿಸಲು ಸಹಾಯ ಮಾಡುತ್ತದೆ. ಇದು ವಸಡುಗಳಲ್ಲಿ ಉಂಟಾಗುವ ಇನ್​ಫ್ಲಮೇಶನ್​ ತಡೆಯಲು ಸಹಾಯ ಮಾಡುತ್ತದೆ. ಇನ್ನು ಹಲ್ಲುಗಳಲ್ಲಿ ದಂತಕುಳಿಗಳನ್ನ ಉಂಟುಮಾಡುವ ಬ್ಯಾಕ್ಟೀರಿಯಾವನ್ನು ನಿವಾರಿಸುತ್ತದೆ. ಜೊತೆಗೆ ಬಾಯಿಯ ದುರ್ವಾಸನೆಯನ್ನ ದೂರವಾಗಿಸುತ್ತದೆ.

5. ಜೀರ್ಣಕ್ರಿಯೆ: ಆರೋಗ್ಯಕರ ಜೀರ್ಣಕ್ರಿಯೆಗೆ ಬೇವು ಸಹಾಯ ಮಾಡುತ್ತದೆ. ಇನ್​ಫ್ಲಮೇಶನ್​ ಕಡಿಮೆ ಮಾಡಿ ಹೊಟ್ಟೆ ಮತ್ತು ಕರುಳಿನ ಸಮಸ್ಯೆಗಳು ಬಾರದಂತೆ ರಕ್ಷಿಸುತ್ತದೆ. ಹೊಟ್ಟೆಯಲ್ಲಿ ಉಂಟಾಗುವ ಸೋಂಕುಗಳನ್ನ ನಿವಾರಿಸಿ, ಉತ್ತಮ ಆರೋಗ್ಯ ಒದಗಿಸುತ್ತದೆ.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv