ಹೈ-ಬಿಪಿ ಕಂಟ್ರೋಲ್ ಮಾಡುತ್ತೆ ಗಟ್​​ ಬ್ಯಾಕ್ಟೀರಿಯಾ..! ಅದಕ್ಕಾಗಿ ಯಾವ ಫುಡ್ ತಿನ್ನಬೇಕು?

ತಿನ್ನೋ ಆಹಾರದ ಮೇಲೆ ನಮ್ಮ ಆರೋಗ್ಯದ ಭವಿಷ್ಯ ಇರುತ್ತದೆ. ಬಿಪಿ, ಶುಗರ್ ಸೇರಿದಂತೆ ಅನೇಕ ಖಾಯಿಲೆಯಿಂದ ಬಳಲ್ತಿರೋರು ಆಹಾರ ಸೇವನೆಯಲ್ಲಿ ಎಷ್ಟೇ ಜಾಗೃತರಾಗಿದ್ದರೂ ಸಾಕಾಗಲ್ಲ. ಹೀಗಾಗಿ ಹೈ-ಬಿಪಿ ಇರೋರು Dietary fiber ಆಹಾರ ಪದಾರ್ಥಗಳನ್ನ ಹೆಚ್ಚಾಗಿ ತಿನ್ನಬೇಕು ಅಂತಾ ಸಂಶೋಧನೆಯೊಂದು ಹೇಳಿದೆ.

‘ಸರ್ಕ್ಯುಲೇಷನ್​ ಆನ್​ಲೈನ್​ ಮ್ಯಾಗಜೀನ್’ ಒಂದರಲ್ಲಿ ಪ್ರಕಟವಾಗಿರುವ ವರದಿ ಪ್ರಕಾರ, ನಮ್ಮ ಕರುಳಿನ ಮೇಲಿರುವ ಸೂಕ್ಷ್ಮಜೀವಿಗಳು ಆಹಾರದ ಫೈಬರ್​ನಿಂದ ಪ್ರೋಪಿಯಾನೆಟ್ ಎಂಬ ಕೊಬ್ಬಿನ ಆಮ್ಲವನ್ನ ಉತ್ಪಾದಿಸುತ್ತವೆ. ಈ ಕೊಬ್ಬಿನ ಆಮ್ಲ, ಅಧಿಕ ರಕ್ತದೊತ್ತಡದಿಂದ ಉಂಟಾಗುವ ದುಷ್ಪರಿಣಾಮಗಳನ್ನ ತಡೆಯುತ್ತದೆ. ಅಲ್ಲದೇ ಬಿಪಿ ಹೆಚ್ಚಾದಾಗ ಈ ಆಮ್ಲ ಪ್ರತಿ ಬಾರಿಯೂ ರಕ್ತದೊತ್ತಡವನ್ನ ತಡೆಯುವ ಪ್ರಯತ್ನ ಮಾಡುತ್ತದೆ ವರದಿ ಪ್ರಕಟವಾಗಿದೆ.
ಜರ್ಮನಿಯ the Helmoltz Association ಪ್ರಾಧ್ಯಾಪಕ ಡೊಮಿನಿಕ್ ಮುಲ್ಲರ್ ಹೇಳುವ ಪ್ರಕಾರ, ಅಧಿಕ ರಕ್ತದೊತ್ತಡ ಉಂಟಾದಾಗ ಹೃದಯದ ರಕ್ತನಾಳದ ಕ್ರಿಯೆ ಕುಂಠಿತಗೊಳ್ಳುತ್ತದೆ. ಇಂಥ ಸಂದರ್ಭದಲ್ಲಿ ಪ್ರೋಪಿಯಾನೆಟ್ ಆಮ್ಲ ಸಹಾಯಕ್ಕೆ ಬರುತ್ತದೆ. ಹೀಗಾಗಿ ನಾವು ಸೇವಿಸುವ ಆಹಾರದಲ್ಲಿ ಫೈಬರ್​​ನಂಶ ಹೆಚ್ಚಾಗಿ ಇರುವಂತೆ ನೋಡಿಕೊಳ್ಳಬೇಕು ಅಂತಾ ಪೌಷ್ಠಿಕಾಂಶ ಸಂಸ್ಥೆಗಳು ಹೇಳುತ್ತವೆ. ಅದಕ್ಕೆ ಧಾನ್ಯಗಳು, ಹಣ್ಣುಗಳನ್ನ ಹೆಚ್ಚಾಗಿ ತಿನ್ನಬೇಕು ಅಂತಾ ಸಂಶೋಧಕರು ತಿಳಿಸಿದ್ದಾರೆ.

ಸಂಶೋಧಕರು ಈ ಅಧ್ಯಯನಕ್ಕಾಗಿ, ಮೊದಲ ಬಾರಿಗೆ ಇಲಿಗಳ ಮೇಲೆ ಪ್ರಯೋಗ ನಡೆಸಿದ್ದರು ಅಂತಾ ತಿಳಿದು ಬಂದಿದೆ.