ಬೇವಿನ ಎಲೆ ಅಗೆದು ತಿಂದರೆ ಉಪಯೋಗ ಹಲವು..!

ಬೇವು ಅನೇಕ ಔಷಧೀಯ ಗುಣಗಳನ್ನು ಹೊಂದಿವೆ ಎಂಬುದು ಎಲ್ಲರಿಗೂ ತಿಳಿದಿದೆ. ಬೇವಿನ ಮರದ ಪ್ರತಿಯೊಂದು ಭಾಗದಲ್ಲಿಯೂ ಔಷಧಿಯ ಗುಣಗಳಿವೆ. ಇನ್ನು  ಬೇವಿನ ಮರ 130ಕ್ಕಿಂತಲೂ ಹೆಚ್ಚು ಜೈವಿಕ ಗುಣಗಳನ್ನು ಹೊಂದಿದ್ದು,  ಎಲೆಗಳು, ಕೊಂಬೆ, ತೊಗಟೆ, ಬೀಜ, ಬೇರು, ಹಣ್ಣು, ಹೂವುಗಳಲ್ಲಿಯೂ ಕೂಡ ಅನೇಕ ಔಷಧಿ ಗುಣಗಳಿವೆ. ಸೋಂಕು, ಜ್ವರ, ಚರ್ಮದ ಕಾಯಿಲೆ, ಹಲ್ಲಿನ ಅಸ್ವಸ್ಥತೆ ಸೇರಿದಂತೆ ಅನೇಕ ಸಮಸ್ಯೆಗಳ ಪರಿಹಾರಕ್ಕಾಗಿ ಆಯುರ್ವೇದ ಚಿಕಿತ್ಸೆಯಲ್ಲಿ ಬೇವನ್ನು ಬಳಕೆ ಮಾಡುತ್ತಾರೆ. ಬೇವಿನ ಎಲೆಗಳನ್ನು ಅಗೆದು ತಿನ್ನುವುದರಿಂದ ಯಾವ ಉಪಯೋಗ ಪಡೆಯಬಹುದು ಎಂಬುದರ ಕುರಿತು ಮಾಹಿತಿ ಇಲ್ಲಿದೆ.

ಚರ್ಮಕ್ಕೆ ಸಹಕಾರಿ
ಬೇವಿನ ಎಲೆಗಳಲ್ಲಿ ಆ್ಯಂಟಿ ಬ್ಯಾಕ್ಟೀರಿಯಾ ಗುಣ ಇರುತ್ತದೆ. ಇದರಿಂದಾಗಿ ಸೋಂಕುಗಳು ಹಾಗೂ ಯಾವುದೇ ರೀತಿಯ ಚರ್ಮದ ತೊಂದರೆಗಳಿಗೆ ಬೇವಿನ ಎಲೆ ಉತ್ತಮ ಪರಿಹಾರ ಒದಗಿಸುತ್ತದೆ. ಬೇವಿನ ಎಲೆಗಳನ್ನು ಅಗೆದು ತಿನ್ನುವುದರಿಂದ ಚರ್ಮದ ಸಮಸ್ಯೆಗಳಿಗೆ ಸುಲಭವಾಗಿ ಪರಿಹಾರ ಪಡೆದುಕೊಳ್ಳಬಹುದು. ಇದರಿಂದ ಚರ್ಮವು ಹೊಳಪನ್ನು ಪಡೆದುಕೊಳ್ಳುತ್ತದೆ. ಮೊಡವೆಗಳ ಸಮಸ್ಯೆ ಇದ್ದವರು ಬಿಸಿ ನೀರಿನಲ್ಲಿ ಜೇನುತುಪ್ಪ ಬೇರಿಸಿ ಬೇವಿನ ಎಲೆಗಳನ್ನು ಹಾಕಿ ಸೇವಿಸಿದರೆ ಮೊಡವೆ ಮತ್ತು ಕಪ್ಪು ಚುಕ್ಕೆಗಳು ಕೂಡ ಮಾಯ ಆಗುತ್ತವೆ.

ಕೂದಲ ಪೋಷಣೆ:
ಬೇವಿನ ಎಲೆ ತಿನ್ನುವುದರಿಂದ ನಿಮ್ಮ ಕೂದಲಿಗೆ ಉಪಕಾರಿ. ತಲೆ ಹೊಟ್ಟು ನಿವಾರಿಸಲು ಬೇವಿನ ಎಲೆ ತುಂಬಾ ಸಹಾಯ ಮಾಡುತ್ತದೆ. ಮಲಸ್ಸೆಜಿಯಾ ಎಂಬ ಶಿಲೀಂಧ್ರಗಳ ವಿರುದ್ಧ ಬೇವಿನ ಎಲೆಗಳು ಹೋರಾಡುತ್ತವೆ. ಬಿಸಿನೀರಿನೊಂದಿಗೆ ಬೇವಿನ ಎಲೆಗಳನ್ನು ಹಾಕಿ ತಲೆ ಸ್ನಾನ ಮಾಡುವುದರಿಂದ ತಲೆ ಹೊಟ್ಟು, ಕೂದಲು ಉದುರುವಿಕೆಯನ್ನ ತಡೆಗಟ್ಟಬಹುದು.

ಕಣ್ಣಿನ ದೃಷ್ಟಿಗೆ ಒಳ್ಳೆಯದು
ಬೇವಿನ ಎಲೆಗಳಿಂದ ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಆಯುರ್ವೇದ ಹೇಳುತ್ತದೆ. ಬೇವಿನ ಎಲೆಗಳನ್ನು ತಿನ್ನುವುದರಿಂದ ಕಣ್ಣುಗಳ ದೃಷ್ಟಿಗೆ ಒಳ್ಳೆಯದು. ಇನ್ನು, ತುರಿಕೆ, ದಣಿವು ಅಥವಾ ಕಣ್ಣು ಕೆಂಪಾದರೆ ಬೇವಿನ ಎಲೆಗಳನ್ನು ನೀರಲ್ಲಿ ಬೇಯಿಸಿ, ತಣ್ಣಗಾದ ನಂತರ ಸಮಸ್ಯೆ ಕಾಣಿಸಿಕೊಂಡ ಭಾಗವನ್ನ ಆ ನೀರಿನಿಂದ ತೊಳೆಯುವುದರಿಂದ ಕಣ್ಣಿನ ನೋವು ಕಡಿಮೆ ಆಗುತ್ತದೆ.

Follow us on:

YouTube: firstNewsKannada  Instagram: firstnews_tv  Face Book: firstnews.tv  Twitter: firstnews_tv