ಏರೋಬಿಕ್ಸ್​ ವ್ಯಾಯಾಮದಿಂದ ಏನೆಲ್ಲಾ ಉಪಯೋಗ ಗೊತ್ತಾ..?

ವ್ಯಾಯಾಮಗಳನ್ನ ಮಾಡೋದ್ರಿಂದ ನಾವು ಕೇವಲ ಫಿಟ್​ ಆ್ಯಂಡ್​ ಫೈನ್​ ಆಗಿರುವುದಿಲ್ಲ. ಜೊತೆಗೆ ನಮ್ಮ ಸ್ಟ್ರೆಸ್​ ಕೂಡಾ ಕಡಿಮೆ ಆಗುತ್ತೆ. ಕೆಲಸದ ಒತ್ತಡ, ಫ್ಯಾಮಿಲಿ ಒತ್ತಡ, ಹೀಗೆ ಒತ್ತಡದ ಲೈಫ್​ನಲ್ಲಿ ಒಬ್ಬೊಬ್ಬರಿಗೂ ಒಂದೊಂದು ರೀತಿಯ ಸ್ಟ್ರೆಸ್​ ​ ಇದ್ದೇ ಇರುತ್ತೆ. ಆದ್ರೆ ಎಲ್ಲಾರಿಗೂ ಅನ್ವಯಿಸುವಂತ ಒಂದು ಸುಲಭವಾದ ಸ್ಟ್ರೆಸ್​ ಬಸ್ಟರ್​ ಅಂದ್ರೆ ಅದು ವ್ಯಾಯಾಮಗಳು. ಜರ್ನಲ್ ನ್ಯೂರಾಲಜಿ, ಮೆಡಿಕಲ್​ ಜರ್ನಲ್ ಅಮೆರಿಕನ್ ಅಕ್ಯಾಡೆಮಿ ಆಫ್ ನ್ಯೂರಾಲಜಿಯಲ್ಲಿ ಪ್ರಕಟವಾದ ಆರ್ಟಿಕಲ್​ವೊಂದರ ಪ್ರಕಾರ ನಿಯಮಿತವಾಗಿ ಏರೋಬಿಕ್ಸ್​ ವ್ಯಾಯಾಮಗಳು ನಮ್ಮ ಚಿಂತನೆ ಹಾಗೂ ಸಾಮಾರ್ಥ್ಯವನ್ನ ಹೆಚ್ಚಿಸುತ್ತದೆಯಂತೆ.

ಇನ್ನು ಏರೋಬಿಕ್ಸ್​ ಮಾಡಿದ್ರೆ ಏನೆಲ್ಲಾ ಉಪಯೋಗ..? ಇಲ್ಲಿದೆ ನೋಡಿ
1. ಏರೋಬಿಕ್ಸ್​ ವ್ಯಾಯಾಮ ಮಾಡೋದ್ರಿಂದ ಸ್ನಾಯುಗಳನ್ನು ಬಲಗೊಳ್ಳುತ್ತದೆ.
2. ರಕ್ತ ಪರಿಚಲನೆ ಹೆಚ್ಚಿಸಿ, ರಕ್ತದ ಒತ್ತಡವನ್ನು  ಕಡಿಮೆ ಮಾಡುತ್ತದೆ.
3. ಕೆಂಪು ರಕ್ತ ಕಣಗಳ ಸಂಖ್ಯೆಯನ್ನು ವೃಧ್ಧಿಗೊಳಿಸಿ, ಆಮ್ಲಜನಕ ರವಾನೆ ಸುಗಮಗೊಳಿಸಲು
4. ಖಿನ್ನತೆಯನ್ನ ಕಡಿಮೆ ಮಾಡಿ, ನಿಮಗೆ  ಫ್ರೆಶ್​ ಅನುಭವ ನೀಡುತ್ತದೆ.
5. ಮದುಮೇಹವನ್ನ ನಿಯಂತ್ರಣದಲ್ಲಿರಿಸುತ್ತದೆ. ಹೃದಯಕ್ಕೆ ಸಂಬಂಧಪಟ್ಟ ಸಮಸ್ಯೆಗಳಿಂದ ರಕ್ಷಿಸುತ್ತದೆ ಜೊತೆಗೆ ಮೂಳೆಯ ಬೆಳವಣಿಗೆಯನ್ನು ಪ್ರಚೋದಿಸುತ್ತದೆ,
6. ಮೆದುಳಿನಲ್ಲಿ ರಾಸಾಯನಿಕ ಚಟುವಟಿಕೆಯನ್ನು ಹೆಚ್ಚಿಸಿ ಹೊಸ ಮೆದುಳಿನ ಕೋಶಗಳನ್ನು ಸೃಷ್ಟಿಸಲು ಸಹಕರಿಸುತ್ತೆ. ಪರಸ್ಪರ ಮೆದುಳಿನ ಸಂಪರ್ಕ ಹೆಚ್ಚುವುದರಿಂದ ಏಕಾಗ್ರತೆಯನ್ನ ಹೆಚ್ಚುತ್ತದೆ.
7. ಮುಖ್ಯವಾಗಿ ದೇಹದ ತೂಕ ಕಡಿಮೆ ಮಾಡಲು ಸಹಕಾರಿಯಾಗಿದೆ. ಏರೋಬಿಕ್ಸ್​ ವ್ಯಾಯಾಮ ಮಾಡೋದ್ರಿಂದ ಕಡಿಮೆ ಸಮಯದಲ್ಲಿ ಹೆಚ್ಚು ಕ್ಯಾಲೋರೀಸ್​ ಬರ್ನ್​ ಮಾಡಬಹುದು.

Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv