‘ಪ್ರಧಾನಿ ಮೋದಿಯಿಂದ ದೇಶ ಸರ್ವನಾಶವಾಗಲಿದೆ’

ಮಂಗಳೂರು: ಚುನಾವಣೆಗೂ ಮೊದಲು ವ್ಯಕ್ತಿಯೊಬ್ಬನಿಗೆ ಥಳಿಸಿ ವಿವಾದಕ್ಕೆ ಗುರಿಯಾಗಿದ್ದ ಬೆಳ್ತಂಗಡಿ ಮಾಜಿ ಶಾಸಕ ವಸಂತ ಬಂಗೇರಾ ಈಗ ಪ್ರಧಾನಿ ಮೋದಿ, ಸರ್ಕಾರಿ ಅಧಿಕಾರಿಗಳನ್ನು ಹಾಗೂ ಪತ್ರಕರ್ತರನ್ನು ಹಿನಾಯ ಬೈದು ಮತ್ತೆ ವಿವಾದಕ್ಕೆ ಗುರಿಯಾಗಿದ್ದಾರೆ.
ಇವತ್ತು ಚಾರ್ಮಾಡಿ ಘಾಟ್ ವೀಕ್ಷಣೆಗೆ ತೆರಳಿದ್ದ ವಸಂತ ಬಂಗೇರಾ ತನ್ನ ಬೆಂಬಲಿಗರ ಎದುರಲ್ಲಿ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗೆ ಕರೆ ಮಾಡಿ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಕೆಲಸ ಮಾಡದಿದ್ರೆ ಸುಮ್ಮನೆ ಬಿಡೋದಿಲ್ಲ, ಮಾನ ಮರ್ಯಾದೆ ಇಲ್ವಾ ಅಂತಾ ಜೋರು ಧ್ವನಿಯಲ್ಲೇ ಗದರಿದ್ದಾರೆ. ಇನ್ನು, ಮಾಧ್ಯಮಗಳ ಮೇಲೂ ದರ್ಪ ತೋರಿಸಿದ ವಸಂತ ಬಂಗೇರಾ ಮಾಧ್ಯಮಗಳಿಗೆ ಗೌರವ ಕೊಟ್ರೇ ನನ್ನಷ್ಟು ನೀಚ ಬೇರೆ ಯಾರೂ ಇಲ್ಲ. ಮಾಧ್ಯಮದಿಂದ ದೇಶ ಹಾಳಾಗುತ್ತಿದೆ ಅಂತ ದರ್ಪದ ಹೇಳಿಕೆ ನೀಡಿದ್ದಾರೆ. ಅಲ್ಲದೇ ಪ್ರಧಾನಿ ಮೋದಿಯಿಂದ ದೇಶ ಸರ್ವನಾಶವಾಗಲಿದೆ ಎಂದು ಹೇಳಿದ್ದಾರೆ. ವಸಂತ ಬಂಗೇರಾ ಅಧಿಕಾರದಲ್ಲಿ ಇರುವಾಗಲೂ ದರ್ಪದಿಂದಲೇ ಕುಖ್ಯಾತಿ ಪಡೆದಿದ್ದು, ಸೋಲಿನ ಬಳಿಕವೂ ದರ್ಪ ಮುಂದುವರಿಸಿರೋದು ಈಗ ಚರ್ಚೆಗೆ ಗ್ರಾಸವಾಗಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv