ಸವದತ್ತಿ ಮತ್ತು ಬೈಲಹೊಂಗಲದಲ್ಲಿ ಮಳೆಯ ಅವಾಂತರ

ಬೆಳಗಾವಿ: ಜಿಲ್ಲೆಯಲ್ಲಿ ಮಳೆ ಅಬ್ಬರ ಮುಂದುವರೆದಿದ್ದು ಸವದತ್ತಿ ಹಾಗೂ ಬೈಲಹೊಂಗಲ ಪಟ್ಟಣದಲ್ಲಿ ನಿನ್ನೆ ಭಾರೀ ಮಳೆಯಾಗಿದೆ. ಪರಿಣಾಮ ಸವದತ್ತಿ ಹೊರವಲಯದ ಲಂಡ್ಯಾನ್ ಹಳ್ಳದ ಇಕ್ಕೆಲಗಳಲ್ಲಿರುವ ಮನೆಗಳಿಗೆ ನೀರು ನುಗ್ಗಿ‌ ಜನಜೀವನ ಅಸ್ತವ್ಯಸ್ತವಾಗಿದೆ. ಇದಷ್ಟೇ ಅಲ್ಲದೇ ತಗ್ಗು ಪ್ರದೇಶದಲ್ಲಿರುವ ಐವತ್ತಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿದೆ. ಉಗರಗೋಳ, ಅಸುಂಡಿ, ಹಿರೇಕುಂಬಿ, ಯಲ್ಲಮ್ಮನಗುಡ್ಡ, ಚಿಕ್ಕುಂಬಿ ಗ್ರಾಮಗಳಲ್ಲಿ ಜನ ಜೀವನ ಅಸ್ತವ್ಯಸ್ತವಾಗಿದೆ