ಐಪಿಎಲ್​ 2019ರಲ್ಲಿ ಆಟಗಾರರ ವರ್ಕ್​ಲೋಡ್​ಗೆ ಕಡಿವಾಣ..?

ಮುಂಬರುವ ವಿಶ್ವಕಪ್​ ಟೂರ್ನಿಗಾಗಿ ಟೀಮ್ ಇಂಡಿಯಾ ಭರ್ಜರಿ ತಯಾರಿ ನಡೆಸಿದೆ. ಈಗಿನಿಂದಲೇ ಗೇಮ್​ ಪ್ಲಾನ್ ರೂಪಿಸುತ್ತಿದೆ. ಬಿಸಿಸಿಐ ಕೂಡ ಆಟಗಾರರ ಫಿಟ್ನೆಸ್​ ಬಗ್ಗೆ ಕಾಳಜಿ ವಹಿಸಿದೆ. ವಿರಾಟ್ ಕೊಹ್ಲಿ ಪಡೆಯ ಆಟಗಾರರು ವಿಶ್ವಕಪ್​ಗೆ ಮೊದಲು ಐಪಿಎಲ್​ ಟೂರ್ನಿ ಆಡಲಿದ್ದಾರೆ. ಹೀಗಾಗಿ ಟೂರ್ನಿಯ ವೇಳೆ ಆಟಗಾರರ ಫಿಟ್​ನೆಸ್ ಹಾಗು ಅವರ ವರ್ಕ್​ಲೋಡ್​ನ ಮೌಲ್ಯಮಾಪನ ಮಾಡಲು ಬಿಸಿಸಿಐ ಮುಂದಾಗಿದೆ. ಅದರಲ್ಲು ತಂಡದ ಪ್ರಮುಖ ಬೌಲರ್​ಗಳಾದ ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್, ಮಹಮ್ಮದ್ ಶಮಿ, ರಿಸ್ಟ್ ಸ್ಪಿನ್ನರ್​ಗಳಾದ ಯಜುವೇಂದರ್ ಕುಲ್​ದೀಪ್ ಯಾದವ್ ಮೇಲೆ ಹೆಚ್ಚಿನ ಗಮನಹರಿಸಲು ನಿರ್ಧರಿಸಿದೆ. ವಿಶ್ವಕಪ್​ನಲ್ಲಿ ಬೌಲರ್​ಗಳು ಮಹತ್ವದ ಪಾತ್ರವಹಿಸಲಿದ್ದಾರೆ. ಇದರಿಂದಾಗಿ ಬೌಲರ್​ಗಳು ಹೆಚ್ಚಿನ ಒತ್ತಡದಿಂದ ಬಳಲದಂತೆ ನೋಡಿಕೊಳ್ಳೋದು ನಮ್ಮ ಯೋಚನೆಯಾಗಿದೆ. ಅಗತ್ಯ ಎನಿಸಿದ್ರೆ ಈ ಬಗ್ಗೆ ಐಪಿಎಲ್​ ಫ್ರಾಂಚೈಸಿಗಳಿಗೆ ಸೂಚಿಸಲಿದ್ದೇವೆ ಎಂದು ಬಿಸಿಸಿಐ ಉಪ ಕಾರ್ಯದರ್ಶಿ ಅಮಿತಾಬ್ ಚೌಧರಿ ತಿಳಿಸಿದ್ದಾರೆ. ಈ ಹಿಂದೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ತಂಡದ ಪ್ರಮುಖ ಬೌಲರ್​ಗಳಿಗೆ ಐಪಿಎಲ್​ನಿಂದ ವಿಶ್ರಾಂತಿ ನೀಡಬೇಕು. ಇದರಿಂದ ಹೆಚ್ಚಿನ ವಿಶ್ವಕಪ್​ ಟೂರ್ನಿಯಲ್ಲಿ ತಂಡಕ್ಕೆ  ಅನುಕೂಲವಾಗಲಿದೆ ಎಂದು ಬಿಸಿಸಿಐಗೆ ಮನವಿ ಮಾಡಿದ್ರು. ಆದ್ರೆ ತಂಡದ ಮಾಜಿ ನಾಯಕ ಧೋನಿ ಐಪಿಎಲ್​ನಲ್ಲಿ ಬೌಲರ್​ಗಳು ಆಡಿದ್ರೆ ಒತ್ತಡದಲ್ಲಿ ಆಡುವುದನ್ನ ಕಲಿಯಲಿದ್ದಾರೆ ಎಂದು ಹೇಳಿಕೆ ನೀಡಿದ್ರು.