ರಾಯುಡು ಪಾಲಿಗೆ ವಿಲನ್​ ಆದ್ರಾ ಕೆ.ಎಲ್ ರಾಹುಲ್..?

ಟೀಂ ಇಂಡಿಯಾ ಆಟಗಾರ ಅಂಬಟಿ ರಾಯುಡು ವಿಶ್ವಕಪ್ ಟೂರ್ನಿಯ ರೇಸ್​ನಿಂದ ಹೊರಬಿದ್ದಿದ್ದಾರೆ.ಕನ್ನಡಿಗ ಕೆ.ಎಲ್ ರಾಹುಲ್ ರಾಯುಡು ಪಾಲಿಗೆ ವಿಲನ್ ಆಗಿದ್ದಾರೆ.ಹೌದು,ವಿಶ್ವಕಪ್​ ಟೂರ್ನಿ ಆಡುವ ಕನಸು ಕಾಣುತ್ತಿದ್ದ ರಾಯುಡುಗೆ ನಿರಾಸೆಯಾಗಿದೆ.ಬಿಸಿಸಿಐ ಪ್ರಕಟಿಸಿರುವ 15 ಆಟಗಾರರ ಟೀಂ ಇಂಡಿಯಾದಲ್ಲಿ ರಾಯುಡುಗೆ ಚಾನ್ಸ್ ಸಿಕ್ಕಿಲ್ಲ.ಬ್ಯಾಟಿಂಗ್ ವಿಭಾಗದ ನಂ.4ರ ಸ್ಲಾಟ್​ಗಾಗಿ ರಾಯುಡು ಹಾಗು ರಾಹುಲ್ ನಡುವೆ ಸಾಕಷ್ಟು ಕಾಂಪಿಟೇಶನ್ ಇತ್ತು.ಈ ಹಿಂದಿನ ಕೆಲ ಏಕದಿನ ಸರಣಿಗಳಲ್ಲಿ ರಾಯುಡು ನಾಲ್ಕನೇ ಕ್ರಮಾಂಕದಲ್ಲಿ ಆಡಿ ಸೈ ಎನಿಸಿಕೊಂಡಿದ್ದರು.ಹೀಗಾಗಿ ರಾಯುಡುರನ್ನ ಈ ಸ್ಥಾನಕ್ಕೆ ಪರಗಣಿಸಬಹುದು ಎಂದು ಅಭಿಮಾನಿಗಳು ನಿರೀಕ್ಷಿಸಿದ್ರು.ಆದ್ರೆ ಆಯ್ಕೆ ಸಮಿತಿ ರಾಹುಲ್​ಗೆ ಮಣೆ ಹಾಕಿದೆ.ಬ್ಯಾಕಪ್​ ಓಪನರ್ ಹಾಗು ಮಿಡ್ಲ್​ ಆರ್ಡರ್​ನಲ್ಲೂ, ಬ್ಯಾಟ್​ ಬೀಸುವ ಸಾಮರ್ಥ್ಯ ಹೊಂದಿರುವ ಹಿನ್ನೆಲೆಯಲ್ಲಿ ರಾಹುಲ್​ಗೆ ಚಾನ್ಸ್ ನೀಡಿದೆ ಎನ್ನಲಾಗ್ತಿದೆ. ಅಲ್ಲದೇ ರಾಯುಡುಗೆ ಹೋಲಿಸಿದ್ರೆ,ಫೀಲ್ಡಿಂಗ್​ನಲ್ಲೂ ಚುರುಕಾಗಿದ್ದಾರೆ.ಅಲ್ಲದೇ ಸದ್ಯ ನಡೆಯುತ್ತಿರುವ ಐಪಿಎಲ್​ 12ರಲ್ಲಿ ರಾಹುಲ್ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಇದೇ ಕಾರಣದಿಂದ ರಾಯುಡರನ್ನ ಹಿಂದಿಕ್ಕಿ,ವಿಶ್ವಕಪ್ ತಂಡದಲ್ಲಿ ರಾಹುಲ್ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.