ಕ್ರಿಕೆಟ್ ದೇವರು ಸಚಿನ್, ವಿವಿಎಸ್ ಲಕ್ಷ್ಮಣ್​ಗೆ ನೋಟಿಸ್..!

ಕ್ರಿಕೆಟ್ ದೇವರು, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹಾಗೂ ವಿವಿಎಸ್​ ಲಕ್ಷ್ಮಣ್​ಗೆ ಬಿಸಿಸಿಐನ ಸಾರ್ವಜನಿಕ ತನಿಖಾಧಿಕಾರಿ ನೋಟಿಸ್ ನೀಡಿದ್ದಾರೆ. ಭಾರತ ತಂಡದ ಇಬ್ಬರೂ ಮಾಜಿ ಆಟಗಾರರು ಸದ್ಯ ಐಪಿಎಲ್ ತಂಡಗಳ ಮೆಂಟರ್​ಗಳಾಗಿ ಕಾರ್ಯ ನಿರ್ವಹಿಸ್ತಿದ್ದಾರೆ. ಸಚಿನ್ ತೆಂಡೂಲ್ಕರ್ ಮುಂಬೈ ಇಂಡಿಯನ್ಸ್​ಗೆ ಹಾಗೂ ವಿವಿಎಸ್ ಲಕ್ಷ್ಮಣ್ ಸನ್ ರೈಸರ್ಸ್ ಹೈದರಾಬಾದ್ ತಂಡದ ಮೆಂಟರ್​ಗಳಾಗಿದ್ದಾರೆ.

ಸಚಿನ್ ಹಾಗೂ ಲಕ್ಷ್ಮಣ್ ಕ್ರಿಕೆಟ್ ಅಡ್ವೈಸರಿ ಕಮಿಟಿ (ಸಿಎಸಿ) ಸದಸ್ಯರಾಗಿಯೂ ಕಾರ್ಯನಿರ್ವಹಿಸುತ್ತಿದ್ದು, ಅವರ ಇತರೆ ಹುದ್ದೆಗಳಿಂದಾಗಿ ಕಾನ್ಫ್ಲಿಕ್ಟ್ ಆಫ್ ಇಂಟ್ರೆಸ್ಟ್ ಉಂಟಾಗುವ ಸಾಧ್ಯತೆ ಇದೆ. ಇದು ಆಟಗಾರರ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ ಅಂತ ದೂರು ಬಂದಿತ್ತು. ಈ ಹಿನ್ನೆಲೆಯಲ್ಲಿ ಇಬ್ಬರಿಗೂ ನೋಟಿಸ್ ನೀಡಲಾಗಿದೆ. ಈಗಾಗಲೇ ಈ ವಿಚಾರವಾಗಿ ಟೀಮ್ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿಗೂ ನೋಟಿಸ್ ನೀಡಲಾಗಿತ್ತು. ಗಂಗೂಲಿ ಡೆಲ್ಲಿ ಕ್ಯಾಪಿಟಲ್ಸ್​​ನ ಮೆಂಟರ್ ಆಗಿದ್ದು, ಸಿಎಸಿ ಸದಸ್ಯರೂ ಆಗಿದ್ದಾರೆ.

ಏಪ್ರಿಲ್ 28ರೊಳಗೆ ನಿಮ್ಮ ಅಭಿಪ್ರಾಯವನ್ನ ಲಿಖಿತ ರೂಪದಲ್ಲಿ ತಿಳಿಸಬೇಕು ಅಂತ ಸದ್ಯ ಸಚಿನ್ ಹಾಗೂ ಲಕ್ಷ್ಮಣ್​ಗೆ ಬಿಸಿಸಿಐನ ಸಾರ್ವಜನಿಕ ತನಿಖಾಧಿಕಾರಿ ಹಾಗೂ ಎಥಿಕ್ಸ್ ಆಫೀಸರ್, ನಿವೃತ್ತ ನ್ಯಾಯಮೂರ್ತಿ ಡಿ.ಕೆ. ಜೈನ್ ನೋಟಿಸ್ ನೀಡಿದ್ದಾರೆ. ಬಿಸಿಸಿಐಗೂ ಇದರ ಪ್ರತಿಯನ್ನ ಕಳಿಸಲಾಗಿದ್ದು, ಈ ಬಗ್ಗೆ ಅಭಿಪ್ರಾಯ ತಿಳಿಸುವಂತೆ ಸೂಚಿಸಲಾಗಿದೆ. ಈಗಾಗಲೇ ಜಸ್ಟಿಸ್ ಜೈನ್ ಎದುರು ಗಂಗೂಲಿ ಹಾಜರಾಗಿ ತಮ್ಮ ಸ್ಪಷ್ಟನೆ ನೀಡಿದ್ದರು. ಇನ್ನು, ಏಪ್ರಿಲ್ 28ರೊಳಗೆ ಉತ್ತರಿಸದಿದ್ದಲ್ಲಿ ಕ್ರಮ ಕೈಗೊಳ್ಳಲಾಗುತ್ತೆ. ಅಲ್ಲದೆ ನಿಮಗೆ ಮತ್ತೆ ಉತ್ತರಿಸುವುದಕ್ಕೆ ಅವಕಾಶವನ್ನ ಕೊಡಲಾಗುವುದಿಲ್ಲ ಅಂತಲೂ ನೋಟಿಸ್​ನಲ್ಲಿ ಸೂಚಿಸಲಾಗಿದೆ.