ನಗರ ಸ್ವಚ್ಛ ಮಾಡೋ ಪೌರ ಕಾರ್ಮಿಕರಿಗಿಲ್ಲ ಸಂಬಳ, ಆತ್ಮಹತ್ಯೆಗೆ ಶರಣಾದ ಪೌರಕಾರ್ಮಿಕ..!

ಬೆಂಗಳೂರು: ಬಿಬಿಎಂಪಿ ಪೌರಕಾರ್ಮಿಕ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವೈಯಾಲಿಕಾವಲ್‌ನ ಮುನೇಶ್ವರ ಬ್ಲಾಕ್‌ನಲ್ಲಿ ನಡೆದಿದೆ. ಸುಬ್ರಹ್ಮಣ್ಯ (38) ಆತ್ಮಹತ್ಯೆ ಮಾಡಿಕೊಂಡ ಪೌರ ಕಾರ್ಮಿಕ.
ಸುಬ್ರಹ್ಮಣ್ಯ ಕಳೆದ 12ವರ್ಷದಿಂದ ಬಿಬಿಎಂಪಿಯಲ್ಲಿ‌ಪೌರ ಕಾರ್ಮಿಕನಾಗಿ ಕೆಲಸ‌ಮಾಡ್ತಿದ್ದ. ಕಳೆದ ಏಳು ತಿಂಗಳಿನಿಂದ ಬಿಬಿಎಂಪಿ ಸಂಬಳ ನೀಡಿರಲಿಲ್ಲ ಅಂತಾ ಆರೋಪಿಸಲಾಗಿದೆ. ಇದ್ರಿಂದ ಮನನೊಂದು ಪೌರ ಕಾರ್ಮಿಕ ನಿನ್ನೆ ರಾತ್ರಿ ವಿಷ ಕುಡಿದು ಆತ್ಮಹತ್ಯೆಗೆ ಶರಣಾಗಿದ್ದಾನೆ ಅಂತಾ ಮೃತ ಸುಬ್ರಹ್ಮಣ್ಯ ಕುಟುಂಬಸ್ಥರು ಆರೋಪಿಸಿದ್ದಾರೆ. ಸದ್ಯ ಪೌರ ಕಾರ್ಮಿಕನ ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆಂದು ಕೆಸಿ‌ಜೆನೆರಲ್ ಆಸ್ಪತ್ರೆಗೆ‌ ರವಾನೆ ಮಾಡಲಾಗಿದೆ.

ಪೌರಕಾರ್ಮಿಕರ‌ ಅಳಲಿಗೆ ಕಿವಿಗೊಡದ ಪಾಲಿಕೆ..
ಬೆಂಗಳೂರು ಮಹಾನಗರ ಪಾಲಿಕೆ ಪೌರಕಾರ್ಮಿಕರ ಅಳಿಲಿಗೆ ಕಿವಿಗೊಡುತ್ತಿಲ್ಲ. ಕಳೆದ 6-7 ತಿಂಗಳಿನಿಂದ ಪೌರಕಾರ್ಮಿಕರಿಗೆ ಸಂಬಳವಿಲ್ಲ. ಬಿಬಿಎಂಪಿ ಸಂಬಳ ಕೊಡದೆ ಸತಾಯಿಸುತ್ತಿದೆ ಎನ್ನಲಾಗ್ತಿದೆ. ಇದುವರೆಗೂ 3500 ಜನ ಪೌರ ಕಾರ್ಮಿಕರಿಗೆ ಸಂಬಳ ಪಾವತಿಯಾಗಿಲ್ಲ ಅಂತಾ ಆರೋಪಿಸಲಾಗಿದೆ. ಬಯೋಮೆಟ್ರಿಕ್ ಸಮಸ್ಯೆ ಹೇಳಿ ಸಂಬಳಕ್ಕೆ ಕೊಕ್ಕೆ ಹಾಕಲಾಗಿದೆ ಎನ್ನಲಾಗಿದೆ.
ಇನ್ನು ಕಳೆದ ಆರೇಳು ತಿಂಗಳಿಂದ ಸಂಬಳ ಸಿಗದ ಹಿನ್ನೆಲೆ ಪೌರಕಾರ್ಮಿಕರು ಪ್ರತಿಭಟನೆ ನೀಡಿದ್ದಾರೆ. ಆದ್ರೂ ಯಾವುದೇ ಪ್ರಯೋಜನವಾಗಿಲ್ಲ. ಕಳೆದ ಒಂದು ವರ್ಷದ ಹಿಂದೆ ಪೌರಕಾರ್ಮಿಕರಾಗಿ ನೇಮಕಗೊಂಡವರನ್ನು ಪಾಲಿಕೆ ತೆಗೆಯಲು ಮುಂದಾಗಿದೆ ಅಂತಾ ಆರೋಪ ಕೇಳಿ ಬಂದಿದ್ದು, ಪಾಲಿಕೆಯ ಕ್ರಮಕ್ಕೆ ಪೌರಕಾರ್ಮಿಕರ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv