ಬಿಬಿಎಂಪಿ ಕಚೇರಿಗೆ ನುಗ್ಗಿ ಗುತ್ತಿಗೆದಾರರಿಂದ ದಾಂಧಲೆ

ಬೆಂಗಳೂರು: ಬಾಕಿ ಹಣ ನೀಡಿಲ್ಲ ಅಂತಾ ಆರೋಪಿಸಿ ಬಿಬಿಎಂಪಿ ಗುತ್ತಿಗೆದಾರರು ಗಲಾಟೆ ಮಾಡಿದ್ದಾರೆ. ಕಚೇರಿಗೆ ನುಗ್ಗಿ ದಾಂಧಲೆ ಎಬ್ಬಿಸಿದ್ದು, ಕಿಟಕಿ ಗಾಜು ಒಡೆದು ಹಾಕಿದ್ದಾರೆ. ಈ ವೇಳೆ, ಗುತ್ತಿಗೆರಾರೊಬ್ಬರ ಕೈಗೆ ಗಾಯವಾಗಿದೆ. ಇನ್ನು ಸ್ಥಳಕ್ಕೆ ಆರ್.ಆರ್ .ನಗರ ಪೊಲೀಸರು ಭೇಟಿ ಪರಿಶೀಲನೆ ನಡೆಸಿದರು.