ಅಧಿಕಾರಿಗಳಿಗೆ ಧಮ್ಕಿ ಹಾಕಿದ್ರೆ ಜೈಲು ಶಿಕ್ಷೆ : BBMP ವಿಶೇಷ ಆಯುಕ್ತ ರಣ್​​ದೀಪ್ ಎಚ್ಚರಿಕೆ

ಬೆಂಗಳೂರು: ಅಧಿಕಾರಿಗಳಿಗೆ ಯಾರಾದರೂ ಬೆದರಿಕೆ ಹಾಕಿದ್ರೆ ಎರಡು ವರ್ಷ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಅಂತಾ ಬಿಬಿಎಂಪಿ ವಿಶೇಷ ಆಯುಕ್ತ ರಣ್​​​ದೀಪ್ ಎಚ್ಚರಿಸಿದ್ದಾರೆ. ಕಸ ಬಿಲ್ ಕ್ಲಿಯರ್ ಮಾಡುವಂತೆ ಅಧಿಕಾರಿಗೆ ಧಮ್ಕಿ ಹಾಕಿದ್ದ ಪ್ರಕರಣವೊಂದರ ಸಂಬಂಧ ಪ್ರತಿಕ್ರಿಯಿಸಿದ ಅವರು, ಯಾರೂ ಕೂಡ ಅಧಿಕಾರಿಗಳಿಗೆ ಧಮ್ಕಿ ಹಾಕುವಂತಿಲ್ಲ. ಒಂದು ವೇಳೆ ಹಾಗೆ ಮಾಡಿದರೆ ಎರಡು ವರ್ಷ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ. ಇನ್ನು ಕಸದ ವಾಹನಗಳಿಗೆ ಜಿಪಿಎಸ್ ಅಳವಡಿಸಲು ಪಾಲಿಕೆ ನಿರ್ಧಾರ ಮಾಡಿದೆ. ಈಗಾಗಲೇ ಕೆಲವು ವಾಹನಗಳಿಗೆ ಅಳವಡಿಸಲಾಗಿದೆ. ಕಸದ ಆಟೋ ಮತ್ತು ಟಿಪ್ಪರ್​ಗಳಿಗೆ ಆರ್‌ಎಫ್ಐಡಿ ಅಳವಡಿಸಲು ತೀರ್ಮಾನ ಮಾಡಲಾಗಿದೆ. ಇದರಿಂದ ಯಾವ ವಾಹನ ಎಲ್ಲಿಗೆ ಹೋಗಲಿದೆ ಅನ್ನೋ ಮಾಹಿತಿ ಸಿಗಲಿದೆ. ಇದರ ಆಧಾರದ ಮೇಲೆ ಬಿಲ್ ಪಾವತಿ ಮಾಡುತ್ತೇವೆ ಎಂದು ತಿಳಿಸಿದರು.