ಕೆಂಪೇಗೌಡ ದಿನಾಚರಣೆಯನ್ನು ಮುಂದೂಡಿದ ಬಿಬಿಎಂಪಿ

ಬೆಂಗಳೂರು: ಬಿಬಿಎಂಪಿ ವತಿಯಿಂದ ಆಚರಿಸುವ ಕೆಂಪೇಗೌಡ ದಿನಾಚರಣೆಯನ್ನು ಮುಂದೂಡಲಾಗಿದೆ. ಮುಖ್ಯಮಂತ್ರಿ ಹೆಚ್‌.ಡಿ.ಕುಮಾರಸ್ವಾಮಿಯವರನ್ನು ಕೇಳಿ, ಇದೇ ತಿಂಗಳ 18ರಂದು ಕೆ‌ಂಪೇಗೌಡ ಜಯಂತಿಯನ್ನು ನಿಗದಿಪಡಿಸಲಾಗಿತ್ತು. ಆದರೆ ದೆಹಲಿಯಲ್ಲಿ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸಂಸದರ ಸಭೆ ನಿಗದಿಯಾಗಿರೋ ಹಿನ್ನೆಲೆಯಲ್ಲಿ ಕೆಂಪೇಗೌಡ ದಿನಾಚರಣೆಯನ್ನು ಮುಂದೂಡಲಾಗಿದೆ. ಬಿಬಿಎಂಪಿ ಈಗಾಗಲೇ ಕೆಂಪೇಗೌಡ ದಿನಾಚರಣೆಗೆ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿತ್ತು. ಆಮಂತ್ರಣದ ಕರುಡು ಪ್ರತಿ, ಕೆಂಪೇಗೌಡ ಪ್ರಶಸ್ತಿಗೆ ಅರ್ಜಿ ಸ್ವೀಕಾರ, ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಿದ್ಧಪಡಿಸಲಾಗಿತ್ತು. ನಾಡಪ್ರಭು ಕೆಂಪೇಗೌಡ ಪ್ರಶಸ್ತಿಯನ್ನು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಯವರು ಪ್ರಧಾನ ಮಾಡಬೇಕಿದೆ. ಆದರೆ ಸಿಎಂ ಆ ದಿನ ದೆಹಲಿಗೆ ತೆರಳಬೇಕಿರೋದ್ರಿಂದ ಕೆಂಪೇಗೌಡ ದಿನಾಚರಣೆಯನ್ನು ಮುಂದೂಡಲು ತಿಳಿಸಿದ್ದಾರೆ ಎಂದು ತಿಳಿದುಬಂದಿದೆ. ಮುಖ್ಯಮಂತ್ರಿಗಳಿಂದ ದಿನಾಂಕ ಸಿಕ್ಕ ಕೂಡಲೇ ಇದೇ ತಿಂಗಳಲ್ಲಿ ಕೆಂಪೇಗೌಡ ದಿನಾಚರಣೆ ನಡೆಸಲಾಗುವುದು ಅಂತಾ ಬಿಬಿಎಂಪಿ ಮೂಲಗಳು ತಿಳಿಸಿವೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv