ಇಸ್ರೇಲ್​ನಿಂದ ಬಿಬಿಎಂಪಿ ಮೇಯರ್​ಗೆ ಆಹ್ವಾನ ಪತ್ರ..

ಬೆಂಗಳೂರು: ಬಿಬಿಎಂಪಿ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್​ ಅವರಿಗೆ ಇಸ್ರೇಲ್ ಆಹ್ವಾನ ನೀಡಿದೆ. ದಕ್ಷಿಣ ಭಾರತದ ಇಸ್ರೇಲ್ ರಾಯಭಾರಿ ಕಚೇರಿಯಿಂದ ಮೇಯರ್​ಗೆ ಅಭಿನಂದನೆ ಸಲ್ಲಿಸಲಾಗಿದೆ. ಅಲ್ಲದೇ ಬೆಂಗಳೂರು-ಇಸ್ರೇಲ್ ಜಂಟಿಯಾಗಿ ಅಭಿವೃದ್ಧಿ ಮುಂದುವರೆಸಲು ಮಾತುಕತೆಗೆ ಆಹ್ವಾನ ನೀಡಿದೆ. ಸದ್ಯದಲ್ಲೇ ಭೇಟಿ ದಿನಾಂಕ ನಿಗದಿಪಡಿಸುವುದಾಗಿ ಆಹ್ವಾನ ಪತ್ರದಲ್ಲಿ ರಾಯಭಾರಿ ತಿಳಿಸಿದ್ದಾರೆ. ಇಸ್ರೇಲ್​ನ ಅಭಿನಂದನೆ, ಆಹ್ವಾನಕ್ಕೆ ಸಂತಸ ವ್ಯಕ್ತಪಡಿಸಿರುವ ಮೇಯರ್ ಗಂಗಾಂಬಿಕೆ, ಸದ್ಯದಲ್ಲೇ ತಾವು ಪ್ರವಾಸ ಹೋಗುವುದಾಗಿ ಹೇಳಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv