ಸಿಟಿ ರೌಂಡ್ಸ್​ ವೇಳೆ ತ್ಯಾಜ್ಯ ಕಂಡು ದಂಗಾದ ಮೇಯರ್​!

ಬೆಂಗಳೂರು: ಸಿಟಿ ರೌಂಡ್ಸ್​ನಲ್ಲಿರುವ ಬಿಬಿಎಂಪಿ ಮೇಯರ್​ ಗಂಗಾಬಿಕೆ ಇಂದು ಕಲಾಸಿಪಾಳ್ಯ ಬಸ್ ನಿಲ್ದಾಣಕ್ಕೆ ತೆರಳಿ ಪರಿಶೀಲನೆ ನಡೆಸಿದ್ರು. ಈ ವೇಳೆ ಬಸ್ ನಿಲ್ದಾಣದಲ್ಲಿನ ತ್ಯಾಜ್ಯ ಕಂಡು ದಂಗಾದರು. ಅಲ್ಲದೇ, ರಸ್ತೆ ಮಧ್ಯದಲ್ಲೇ ಬಸ್ ನಿಲ್ಲಿಸಿರೋದಕ್ಕೆ ತೀವ್ರ ಅಸಮಧಾನ ವ್ಯಕ್ತಪಡಿಸಿದ ಅವರು, ಫುಟ್ ​ಪಾತ್ ಒತ್ತುವರಿ ಹಾಗೂ ಅವ್ಯವಸ್ಥೆ ಕಂಡು ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡ್ರು.
ಇದೇ ವೇಳೆ ಫುಟ್‌ಪಾತ್ ಮೇಲೆ ಲಗೇಜ್ ಇಟ್ಟು ಪಾದಾಚಾರಿಗಳಿಗೆ ತೊಂದರೆ ಮಾಡಿದ್ದಕ್ಕೆ ಕೆಜಿಎನ್ ರೋಡ್ ಲೈನ್ಸ್‌ ಸಂಸ್ಥೆಗೆ ಬಿಬಿಎಂಪಿ ಅಧಿಕಾರಿಗಳು ₹ 10 ಸಾವಿರ ದಂಡ ವಿಧಿಸಿದರು. ಇನ್ನು ಬಸ್​ ನಿಲ್ದಾಣದಲ್ಲಿನ ರಸ್ತೆ ಅವ್ಯವಸ್ತೆ ಪರಿಶೀಲಿಸಿದ ಮೇಯರ್​ ಗುಣಮಟ್ಟದ ರಸ್ತೆ ನಿರ್ಮಾಣ ಮಾಡದೇ ಇರೋದಕ್ಕೆ ಬೇಸರ ವ್ಯಕ್ತಪಡಿಸಿದ್ರು. ಅಲ್ಲದೇ ಕೂಡಲೇ ರಸ್ತೆ ರಿಪೇರಿ ಮಾಡಿಸುವಂತೆ ಬಿಬಿಎಂಪಿ ಅಧಿಕಾರಿಗಳಿಗೆ ತಾಕೀತು ಮಾಡಿದ್ರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv