ಲೋಕ ಚುನಾವಣೆಗೆ ಬಿಬಿಎಂಪಿ ತಯಾರಿ, ಆ್ಯಪ್ ಬಿಡುಗಡೆ, ಕಂಟ್ರೋಲ್ ರೂಂ

ಬೆಂಗಳೂರು: ಮತದಾರರಿಗೆ ಅನುಕೂಲವಾಗಲೆಂದು ಬಿಬಿಎಂಪಿ ಚುನಾವಣಾ ಆ್ಯಪ್ ಬಿಡುಗಡೆ ಮಾಡಿದೆ. ಬಿಬಿಎಂಪಿಯಲ್ಲಿ 24 ಗಂಟೆ ಕಾರ್ಯ ನಿರ್ವಹಿಸಲು ಕಂಟ್ರೋಲ್ ರೂಮ್​ ಅನ್ನೂ ತೆರೆಯಲಾಗಿದೆ ಅಂತಾ ಚುನಾವಣಾಧಿಕಾರಿ ಮಂಜುನಾಥ್ ಪ್ರಸಾದ್ ಮಾಹಿತಿ ನೀಡಿದ್ದಾರೆ. ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಲೋಕಸಭಾ ಚುನಾವಣೆ ಸಿದ್ಧತೆಗಳ ಬಗ್ಗೆ ಮಾಹಿತಿ ನೀಡಿದ್ರು. ನಗರದಲ್ಲಿ ಬೆಂಗಳೂರು ಉತ್ತರ, ಬೆಂಗಳೂರು ಸೆಂಟ್ರಲ್, ಬೆಂಗಳೂರು ದಕ್ಷಿಣ ಸೇರಿ ಒಟ್ಟು 3 ಸಂಸದೀಯ ಕ್ಷೇತ್ರಗಳಿವೆ. ನಗರದ ಪ್ರತಿಯೊಂದು ಲೋಕಸಭಾ ಕ್ಷೇತ್ರವೂ 8 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿವೆ. ಮೂರು ಲೋಕಸಭಾ ಕ್ಷೇತ್ರಗಳಿಗೆ 410 ಸೆಕ್ಟರ್ಸ್ ಅಧಿಕಾರಿಗಳನ್ನ ನೇಮಕ ಮಾಡಲಾಗಿದೆ. 3 ಲೋಕಸಭಾ ಕ್ಷೇತ್ರಗಳ ಮತಗಟ್ಟೆಗಳಲ್ಲಿ ಒಟ್ಟು 51 ಸಾವಿರ ಸಿಬ್ಬಂದಿ ನೇಮಕ ಮಾಡಲಾಗಿದೆ.

ಒಟ್ಟು 8514 ಮತಗಟ್ಟೆಗಳಿದ್ದು, ಬೆಂಗಳೂರು ಉತ್ತರದಲ್ಲಿ 27,85,269 ಮತದಾರರು, ಬೆಂಗಳೂರು ಸೆಂಟ್ರಲ್​ನಲ್ಲಿ 21,49,847 ಮತದಾರರು ಹಾಗೂ ಬೆಂಗಳೂರು ದಕ್ಷಿಣದಲ್ಲಿ 21,66,445 ಮತದಾರರು ಸೇರಿ ಒಟ್ಟು 71,01561 ಮತದಾರರಿದ್ದಾರೆ. ಮತದಾನದ ನಂತರ ನಗರದಲ್ಲಿ ಮೂರು ಸ್ಟ್ರಾಂಗ್ ರೂಮ್​ಗಳಲ್ಲಿ ಸುರಕ್ಷಿತವಾಗಿ ಇಡಲು ವ್ಯವಸ್ಥೆ ಮಾಡಲಾಗಿದೆ. ಈ ಬಾರಿಯೂ ವಿವಿ ಪ್ಯಾಟ್ ಕಡ್ಡಾಯ ಮಾಡಲಾಗಿದೆ. ಹೆಚ್ಚುವರಿಯಾಗಿ ಶೇಕಡಾ 20 ಇವಿಎಂ ಇರಲಿದೆ ಎಂದು ತಿಳಿಸಿದರು.

ಇನ್ನು ಇದೇ ವೇಳೆ ಏರ್ ಶೋ ಬಗ್ಗೆ ಮಾತನಾಡಿ, ಏರ್​ ಶೋನ ಜಾಹಿರಾತು ಹಾಕಲು‌ ಬಿಬಿಎಂಪಿ ಅನುಮತಿ ನೀಡಿದೆ. ಹೈ ಕೋರ್ಟ್ ಸೂಚನೆ ಮೇರೆಗೆ ಅನುಮತಿ ನೀಡಲಾಗಿದೆ. ಏರ್ ಶೋ‌ ಬಗ್ಗೆ ಜನರಿಗೆ ಮಾಹಿತಿ ನೀಡುವ ಉದ್ದೇಶದಿಂದ ಈ ಜಾಹಿರಾತು ನೀಡಲು ಅನುಮತಿ ನೀಡಲಾಗಿದೆ. ಆದ್ರೆ ಕೇವಲ ಬಟ್ಟೆಯ ಹೋರ್ಡಿಂಗ್ಸ್​ಗಳನ್ನ ಬಳಕೆ‌ ಮಾಡುವಂತೆ ಸೂಚನೆ ನೀಡಲಾಗಿದೆ ಅಂತಾ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಹೇಳಿದರು.


Follow us on:

YouTube: firstNewsKannada  Instagram: firstnews.tv  Face Book: firstnews.tv  Twitter: firstnews.tv