ಬಿನ್ನಿಪೇಟೆಗೆ ಜೂನ್‌ 18ರಂದು ಉಪ ಚುನಾವಣೆ

ಬೆಂಗಳೂರು: ಬಿಬಿಎಂಪಿ ವಾರ್ಡ್ ನಂಬರ್ 121 ಬಿನ್ನಿಪೇಟೆಗೆ ಜೂನ್‌ 18 ರಂದು ಉಪ ಚುನಾವಣೆ ನಡೆಯಲಿದೆ ಎಂದು ರಾಜ್ಯ ಚುನಾವಣಾ ಆಯೋಗ ಘೋಷಣೆ ಮಾಡಿದೆ. ಕಾಂಗ್ರೆಸ್ ಸದಸ್ಯೆ ಮಹದೇವಮ್ಮ ನಿಧನದಿಂದ ತೆರವಾಗಿದ್ದ ವಾರ್ಡ್‌ಗೆ ಉಪಚುನಾವಣೆ ನಡೆಯಲಿದೆ. ದಿನಾಂಕ 18 ರಂದು ಬೆಳಿಗ್ಗೆ 7 ರಿಂದ 5 ಗಂಟೆಯವರೆಗೆ ಮತದಾನ ನಡೆಯಲಿದೆ.

ಬಿನ್ನಿಪೇಟೆಯಲ್ಲಿ ಒಟ್ಟು 37 ಮತಗಟ್ಟೆಗಳ ನಿರ್ಮಾಣ ಮಾಡಲಾಗಿದ್ದು, 30 ಸಾಮಾನ್ಯ ಮತಗಟ್ಟೆಗಳು, 7 ಸೂಕ್ಷ್ಮ ಮತಗಟ್ಟೆಗಳು ಸ್ಥಾಪನೆಗೊಳ್ಳಲಿವೆ.  ಬಿನ್ನಿಪೇಟೆ ವಾರ್ಡ್ ನಲ್ಲಿ ಒಟ್ಟು 34572 ಮತದಾರರಿದ್ದು. 17746 ಪುರುಷ, 16826 ಮಹಿಳಾ ಮತದಾರರಿದ್ದಾರೆ.

ಮತದಾನದ ವೇಳೆ ಚುನಾವಣಾ ಸಿಬ್ಬಂದಿ ನೇಮಿಸಲಾಗಿದ್ದು, ನಾಳೆಯಿಂದ ಮಸ್ಟರಿಂಗ್ ಕಾರ್ಯ ನಡೆಯಲಿದೆ. ಮತದಾನದ ದಿನದಂದು ಸ್ಥಳೀಯ ಸಂಸ್ಥೆಗಳು, ಇಲಾಖೆಗಳು, ಕೈಗಾರಿಕೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಜೂನ್ 20ರಂದು ಮತ ಎಣಿಕೆ ನಡೆಯಲಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv