ಫಸ್ಟ್​ ಟೈಂ ಮಹಿಳಾ ಅಧ್ಯಕ್ಷರಿಂದ ಬಿಬಿಎಂಪಿ ಬಜೆಟ್, ಪಿಂಕ್‌ಮಯವಾದ ಬಜೆಟ್ ಬುಕ್​​​..!

ಬೆಂಗಳೂರು: ಇಂದು 2019-20ನೇ ಸಾಲಿನ‌ ಬಿಬಿಎಂಪಿ ಬಜೆಟ್ ಮಂಡನೆಯಾಗಲಿದೆ. ಬಿಬಿಎಂಪಿ ರಚನೆಯಾದ ಬಳಿಕ ಇದೇ ಮೊದಲ ಬಾರಿಗೆ ಮಹಿಳಾ ಅಧ್ಯಕ್ಷರಿಂದ ಹಾಗೂ ಕಾಂಗ್ರೆಸ್- ಜೆಡಿಎಸ್ ಮೈತ್ರಿಯ 4ನೇ ಬಜೆಟ್ ಮಂಡನೆ ಇದಾಗಿದೆ. ಬಜೆಟ್ ಗಾತ್ರ 10,600 ಕೋಟಿ ರೂಪಾಯಿ ಇರುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷೆ ಹೇಮಲತಾ ಗೋಪಾಲಯ್ಯ ಬಿಬಿಎಂಪಿ ಕೌನ್ಸಿಲ್ ಸಭಾಂಗಣದಲ್ಲಿ ಬಜೆಟ್ ಮಂಡನೆ ಮಾಡಲಿದ್ದಾರೆ.

ಇನ್ನು ಕಳೆದ ಬಾರಿಯ ಬಜೆಟ್​ನಲ್ಲಿ ಶೇಖಡ 55 ರಷ್ಟು ಮಾತ್ರ ಅನುಷ್ಠಾನಗೊಂಡಿದೆ. ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ನಿರ್ಲಕ್ಷ್ಯದಿಂದ 2018-19ನೇ ಸಾಲಿನ ಬಜೆಟ್‌ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಂಡಿಲ್ಲ ಎನ್ನಲಾಗಿದೆ.

ಇಂದಿನ ಸಂಭವನೀಯ ಬಜೆಟ್‌ ಲಿಸ್ಟ್

ಬಿಬಿಎಂಪಿ ಹೆರಿಗೆ ಆಸ್ಪತ್ರೆಯಲ್ಲಿ ಜನಿಸುವ ಎಲ್ಲಾ ಹೆಣ್ಣು ಮಕ್ಕಳಿಗೆ ಪಿಂಕ್‌ ಬೇಬಿ ಯೋಜನೆಯನ್ನ ವಿಸ್ತರಣೆ.
ಬಿಬಿಎಂಪಿ ಆಸ್ಪತ್ರೆಗಳಿಗೆ ಅತ್ಯಾಧುನಿಕ ಲೈಫ್‌ ಸಪೋರ್ಟರ್‌ ಆಂಬ್ಯುಲೆನ್ಸ್‌ಗಳ ಖರೀದಿಗೆ ಅನುದಾನ ಬಿಡುಗಡೆ.
198 ವಾರ್ಡ್‌ಗಳಲ್ಲಿ ಡಯಾಲಿಸಿಸ್‌ ಕೇಂದ್ರ ಸ್ಥಾಪನೆಗೆ ಒತ್ತು.
ಹೊಸ ರೆಫೆರಲ್‌ ಆಸ್ಪತ್ರೆಗಳ ನಿರ್ಮಾಣ.
ಹಾಲು, ಪೇಪರ್‌ ಹಾಕುವವರಿಗೆ ಪ್ರತಿ ವಾರ್ಡ್‌ನಲ್ಲಿ 50 ಸೈಕಲ್‌ ವಿತರಣೆ.
ಒಂಟಿ ಮನೆ ಯೋಜನೆ ಅನುದಾನದಲ್ಲಿ ಹೆಚ್ಚಳ.
ಪ್ರತಿ ವಾರ್ಡ್‌ನಲ್ಲಿ ಎಸ್​ಸಿ, ಎಸ್​ಟಿ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌.
ಸಿದ್ಧಗಂಗಾ ಶ್ರೀಗಳ ಹೆಸರಿನಲ್ಲಿ ಅಕ್ಷರ ದಾಸೋಹ. ಶ್ರೀಗಳ ಹೆಸರಿನಲ್ಲಿ ಪ್ರಶಸ್ತಿ.
ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಆದ್ಯತೆ. ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಶ್ರಮಿಸುತ್ತಿರುವ ಸಂಸ್ಥೆಗೆ ಅನುದಾನ ಬಿಡುಗಡೆ.
ಐಟಿ-ಬಿಟಿ ಸಂಸ್ಥೆಗಳಿರುವ ಪ್ರದೇಶದ ಮೂಲ ಸೌಕರ್ಯ- ಅಭಿವೃದ್ಧಿ.
ಬಿಬಿಎಂಪಿ ಕೇಂದ್ರ ಕಚೇರಿ ಮುಂಭಾಗದಲ್ಲಿರುವ ಕೆಂಪೇಗೌಡ ಗೋಪುರ ದುರಸ್ತಿ.
110 ಹಳ್ಳಿಗಳ ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಬಿಡುಗಡೆ.
ಪೌರ ಕಾರ್ಮಿಕರಿಗೆ ಕೆಲ ಕಲ್ಯಾಣ ಕಾರ್ಯಕ್ರಮಗಳು ಸೇರಿದಂತೆ ಇತರೆ ಪ್ರಮುಖ ಕಾರ್ಯಗಳಿಗೆ ಅನುದಾನ.

ಬಜೆಟ್​ ಫುಲ್​ ‘ಪಿಂಕ್‌’ಮಯ..!
ಬಿಬಿಎಂಪಿ ಬಜೆಟ್‌ ಈ ಬಾರಿ ಫುಲ್​ ಪಿಂಕ್​ ಮಯವಾಗಿದೆ. ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷೆ ಹೇಮಲತಾ ಗೋಪಾಲಯ್ಯರಿಂದ ಬಜೆಟ್ ಮಂಡನೆಯಾಗುತ್ತಿದ್ದು, ಬಜೆಟ್​ ಬುಕ್​ ಕೂಡ ಪಿಂಕ್ ಕಲರ್​ನಲ್ಲೇ ಪ್ರಿಂಟ್​ ಮಾಡಲಾಗಿದೆ.


Follow us on:

YouTube: firstNewsKannada Instagram: firstnews.tv Face Book: firstnews.tv Twitter: firstnews.tv