3 ರೂ. ಎಕ್ಸ್​​ಟ್ರಾ ಕೇಳಿದ್ದಕ್ಕೆ ‘ಬಾಟಾ’ಗೆ ₹9000 ದಂಡ..!

ಚಂಡೀಗಢ: ಬಾಟಾ ಇಂಡಿಯಾ ಸಂಸ್ಥೆಗೆ ಕನ್ಸ್ಯೂಮರ್​ ಫೋರಮ್​ (ಗ್ರಾಹಕರ ಹಿತರಕ್ಷಣಾ ವೇದಿಕೆ) ₹9000 ದಂಡ ವಿಧಿಸಿದೆ. ಶೋ ರೂಂಗೆ ಶೂ ಖರೀದಿಗಾಗಿ ಆಗಮಿಸಿದ್ದ ಗ್ರಾಹಕನ ಬಳಿ ಪೇಪರ್​ ಬ್ಯಾಗ್​ಗೆ 3 ರೂಪಾಯಿ ನೀಡುವಂತೆ ಕೇಳಿದ್ದಕ್ಕೆ ಬಾಟಾ ದಂಡ ಕಟ್ಟುವಂತಾಗಿದೆ. ಚಂಡೀಗಢದಲ್ಲಿರುವ ಬಾಟಾ ಶೋ ರೂಂಗೆ ದಿನೇಶ್​ ಪ್ರಸಾದ್​ ರಾತುರಿ ಎಂಬವವರು ಬಂದಿದ್ದರು. ಶೂ ಖರೀಸಿದಿಸಿದ ಬಳಿಕ ಅದನ್ನು ಕೊಂಡೊಯ್ಯಲು ದಿನೇಶ್​ ಬ್ಯಾಗ್​ ಕೇಳಿದ್ದಾರೆ. ಆಗ ಅಲ್ಲಿನ ಸಿಬ್ಬಂದಿ ಪೇಪರ್​ ಬ್ಯಾಗ್​ಗೆ 3 ರೂಪಾಯಿ ನೀಡಬೇಕಾಗಿ ಹೇಳಿದ್ದಾರೆ. ಇದರಿಂದ ಸಿಟ್ಟಿಗೆದ್ದ ದಿನೇಶ್,​ ಶೋ ರೂಮ್​ ವಿರುದ್ಧ ಗ್ರಾಹಕರ ವೇದಿಕೆಗೆ ದೂರು ನೀಡಿದ್ದರು. ನಾನು 399 ರೂಪಾಯಿ ಬೆಲೆಯ ಶೂ ಖರೀದಿ ಮಾಡಿದ್ದೆ. ಆದ್ರೆ, ಬ್ಯಾಗ್​ಗೆ 3 ರೂಪಾಯಿ ಹೆಚ್ಚುವರಿ ಹಣ ಸೇರಿಸಿ ಒಟ್ಟು 402 ರೂಪಾಯಿ ಚಾರ್ಜ್​ ಮಾಡಿದರು ಅಂತಾ ದಿನೇಶ್ ದೂರು ನೀಡಿದ್ದರು. ಈ ಬಗ್ಗೆ ಕ್ರಮ ಕೈಗೊಂಡಿರುವ ಕನ್ಸ್ಯೂಮರ್​ ಫೋರಮ್ ಬಾಟಾ ಇಂಡಿಯಾ ಸಂಸ್ಥೆಗೆ 9000 ರೂಪಾಯಿ ದಂಡ ವಿಧಿಸಿದೆ. ಇದರಲ್ಲಿ 3000 ರೂಪಾಯಿಯನ್ನು ದೂರು ನೀಡಿದ ಗ್ರಾಹಕನಿಗೆ ಪರಿಹಾರದ ರೂಪದಲ್ಲಿ ನೀಡಬೇಕು ಮತ್ತು 5000 ರೂಪಾಯಿಯನ್ನು ರಾಜ್ಯ ಗ್ರಾಹಕ ವಿವಾದ ಪರಿಹಾರ ಆಯೋಗದಲ್ಲಿ ಡೆಪಾಸಿಟ್ ಮಾಡಬೇಕು ಎಂದು ಸೂಚಿಸಲಾಗಿದೆ.

Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv