ರಾಜಕೀಯ ಪ್ರೇರಿತ ದಾಳಿಯಷ್ಟೆ: ಬಸವರಾಜ ಹೊರಟ್ಟಿ.

ಹುಬ್ಬಳ್ಳಿ: ಈ ದಿನ ಐಟಿ ದಾಳಿ ನಡೆದಿರುವುದು ರಾಜಕೀಯ ಪ್ರೇರಿತ ದಾಳಿಯಷ್ಟೆ. ಜೆಡಿಎಸ್ ಸಪೋರ್ಟರ್ರ್ಸ್ ಹಾಗೂ ಸಚಿವರ ಮನೆಗಳ ಮೇಳೆ ದಾಳಿ ನಡೆಸಲಾಗಿದೆ. ಈ ದಾಳಿ ಚುನಾವಣೆ ಸಮಯದಲ್ಲಿ ಅಪ್ರಸ್ತುತವಾಗಿತ್ತು ಎಂದು ಮಾಜಿ ಸಚಿವ ಬಸವರಾಜ ಹೊರಟ್ಟಿ ನಗರದಲ್ಲಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಕೇಂದ್ರ ಸರ್ಕಾರದ ಕೈಯಲ್ಲಿ ಐಟಿ ಇರೋದ್ರಿಂದ ಕೇಂದ್ರ ಸರ್ಕಾರ ತಮಗೆ ಹೇಗೆ ಬೇಕೋ ಹಾಗೆ ಅಧಿಕಾರವನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ. ಐಟಿ ದಾಳಿಯ ಮೂಲಕ ಇನ್ನೊಬ್ಬರನ್ನು ಕಟ್ಟಿ ಹಾಕಲು ಹೋಗುತ್ತಿದ್ದಾರೆ. ಈ ಟೈಮ್‌ನಲ್ಲಿ ದಾಳಿ ಮಾಡುವುದರಿಂದ ಎಲ್ಲ ಜನರಿಗೆ ಗೊತ್ತಾಗುತ್ತೆ ಎಂದು ಉದ್ದೇಶ ಪೂರ್ವಕವಾಗಿ ದಾಳಿ ನಡೆಸಿದ್ದಾರೆ. ಐಟಿ ದಾಳಿ ಮಾಡಬೇಕಾದ್ರೆ ಈ ಹಿಂದೆಯೇ ಮಾಡಬೇಕಾಗಿತ್ತು. ಚುನಾವಣೆ ಹೊತ್ತಿನಲ್ಲಿ ಮಾಡುವುದು ಎಷ್ಟು ಸರಿ..? ಕೇಂದ್ರ ಸರ್ಕಾರ ಈಗ ಐಟಿ ಮುಂದೆ ಸಿಬಿಐಯನ್ನ ದುರ್ಬಳಕೆ ಮಾಡಿಕೊಳ್ಳುತ್ತೆ ಎಂದು ಮಾಜಿ ಸಚಿವ ಬಸವರಾಜ ಹೊರಟ್ಟಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv