ಯಾರೂ ಮನೆಯಿಂದ 10 ರೂ. ತಂದು ರಾಜಕಾರಣ ಮಾಡಲ್ಲ, ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆ: ಹೊರಟ್ಟಿ

ವಿಜಯಪುರ: ಯಾವ ರಾಜಕಾರಣಿಯೂ ತಮ್ಮ ಮನೆಯಿಂದ ಹತ್ತು ರೂಪಾಯಿ ತಂದು ರಾಜಕಾರಣ ಮಾಡಲ್ಲ. ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆ ಎಂದು ಬಸವರಾಜ್ ಹೊರಟ್ಟಿ ಹೇಳಿದ್ದಾರೆ. ಎಂ.ಬಿ ಪಾಟೀಲ್ ಲಿಂಗಾಯತ ಸಮಾವೇಶ ಮಾಡಲು ಜಲಸಂಪನ್ಮೂಲ ಖಾತೆಯನ್ನು ದುರುಪಯೋಗ ಪಡಸಿಕೊಂಡಿದ್ದರು ಎಂಬ ನಡಹಳ್ಳಿ ಆರೋಪಕ್ಕೆ  ತಿರುಗೇಟು ನೀಡಿರುವ ಬಸವರಾಜ್ ಹೊರಟ್ಟಿ, ನನ್ನ ಜೀವನದಲ್ಲಿ ಇಂತಹ ಹೊಲಸು ರಾಜಕಾರಣ ನೋಡಿಲ್ಲ. ಕೆಲಸ ಇಲ್ಲದೇ ಇರುವವರು ಈ ರೀತಿ ಮಾತಾಡ್ತಾರೆ ಎಂದು ವಾಗ್ದಾಳಿ ನಡೆಸಿದರು.

ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರದ ಬಗ್ಗೆಯೂ ಪ್ರತಿಕ್ರಿಯೆ ನೀಡಿದ ಅವರು, ಎಂ‌.ಬಿ ಪಾಟೀಲ್ ಯಾವ ನಿರ್ಣಯ ತಗೊಂಡ್ರೂ ಅದಕ್ಕೆ ನಾನು ಬದ್ಧ. ಸಿದ್ದರಾಮಯ್ಯ ಸರ್ಕಾರದಲ್ಲಿ ಡಿಕೆ ಶಿವಕುಮಾರ್ ಸಚಿವರಾಗಿದ್ರು. ಲಿಂಗಾಯತ ಹೋರಾಟದ ಸಮಯದಲ್ಲಿ ಡಿ.ಕೆ ಶಿವಕುಮಾರ್ ಯಾಕೆ ಸುಮ್ಮನಿದ್ದರು? ಎಂದು ಪ್ರಶ್ನಿಸಿದರು. ಈ ಹಿಂದೆ ಡಿಕೆ ಶಿವಕುಮಾರ್ ದೇವೆೇಗೌಡ ಕುಟುಂಬಕ್ಕೆ ಬೇಕಾದಂತೆ ಮಾತಾಡ್ತಿದ್ರು, ಇವಾಗ ಒಂದಾಗಿದ್ದಾರೆ. ಇದ್ರಿಂದ ನಮಗೂ ಖುಷಿ ಇದೆ. ವೀರಶೈವ ಲಿಂಗಾಯತರ ನಡುವೆ ಯಾವ ತಕರಾರೂ ಇಲ್ಲ. ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡಬಾರದು ಎಂದು ಹೊರಟ್ಟಿ ಹೇಳಿದರು.

Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv