ನಿಧಿ ವಶೀಕರಣಕ್ಕಾಗಿ ಬಸವಣ್ಣನ ವಿಗ್ರಹ ಕಳವು

ರಾಯಚೂರು: ರಾಜ್ಯದಲ್ಲಿ ನಿಧಿಗಳ್ಳತನ ಹೆಚ್ಚಾಗುತ್ತಿದ್ದು, ವಿಗ್ರಹಗಳನ್ನ ನಾಶಪಡಿಸುವ ಹಾಗೂ ಕಳವು ಮಾಡುವ ಪ್ರಕರಣಗಳು ದಿನೇ ದಿನೆ ಹೆಚ್ಚುತ್ತಿದೆ. 3 ದಿನಗಳ ಹಿಂದೆ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಹುಲ್ಲತ್ತಿ ಗ್ರಾಮದಲ್ಲಿ ನಿಧಿಗೋಸ್ಕರ ಕಿಡಿಗೇಡಿಗಳು ಈಶ್ವರನ ಮೂರ್ತಿ ಭಗ್ನಗೊಳಿಸಿದ್ದರು. ಈ ಘಟನೆ ಮಾಸುವ ಮುನ್ನವೇ ಚಿಕ್ಕಮಗಳೂರು ಹಾಗೂ ರಾಯಚೂರು ಜಿಲ್ಲೆಯಲ್ಲಿ ನಿಧಿ ಆಸೆಗಾಗಿ ದೇವಸ್ಥಾನಗಳ ಬಳಿ ಮಣ್ಣು ಅಗೆದು ವಿಗ್ರಹ ಕಳವು ಮಾಡಿದ್ದಾರೆ.

ರಾಯಚೂರು ಜಿಲ್ಲೆಯ ಚಿಕ್ಕನಗನೂರು ಗ್ರಾಮದಲ್ಲಿ ನಿಧಿ ವಶೀಕರಣಕ್ಕಾಗಿ ಬಸವಣ್ಣನ ವಿಗ್ರಹ ಕಳವು ಮಾಡಲಾಗಿದೆ. ಮತ್ತೊಂದೆಡೆ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಹರಳಹಳ್ಳಿ ಸಮೀಪದ ಪಾಂಡವರ ಗುತ್ತಿ ಎಂಬ ಜಾಗದಲ್ಲಿ ನಿಧಿಚೋರರು ಭೂಮಿ ಅಗೆದಿದ್ದಾರೆ. ಸುಮಾರು ಎರಡ್ಮೂರು ಅಡಿ ಗುಂಡಿ ಕೊರೆದಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv