ಜಾತ್ರೆಯಲ್ಲಿ ಪಿಎಸ್‌ಐ ಮೇಲೆ ಮುನಿದ ಬಸವ!

ರಾಮನಗರ: ಜಾತ್ರಾ ಉತ್ಸವ ಮೆರವಣಿಗೆಯಲ್ಲಿ ಭದ್ರತೆಯಲ್ಲಿದ್ದ ಪೊಲೀಸ್​​ ಅಧಿಕಾರಿ ಮೇಲೆ ಬಸವ ದಾಳಿ ಮಾಡಿದ ಘಟನೆ ರಾಮನಗರದ ಚನ್ನಪಟ್ಟಣ ತಾಲೂಕಿನ ನರಗೂರು ಜಾತ್ರೆಯಲ್ಲಿ ನಡೆದಿದೆ.  ಪ್ರತಿ ವರ್ಷದಂತೆ ಸರಗೂರು ಗ್ರಾಮದಲ್ಲಿ ಮಂಗಳವಾರ ಬಸವೇಶ್ವರ ದೇವರ ಜಾತ್ರೆ ನಡೆಸಲಾಗುತ್ತಿತ್ತು. ಈ ಜಾತ್ರೆಗೆ ಅಪಾರ ಜನಸ್ತೋಮ ಹರಿದು ಬರುವುದರಿಂದ ಹೆಚ್ಚಿನ ಭದ್ರತೆಗಾಗಿ ನೂರಾರು ಪೊಲೀಸರನ್ನು ಬಂದೋಬಸ್ತಿಗಾಗಿ ನಿಯೋಜನೆ ಮಾಡಲಾಗಿತ್ತು. ಈ ವೇಳೆ ಭದ್ರತಾ ಕೆಲಸದಲ್ಲಿದ್ದ ಎಸ್​​.ಐ. ಭಾಸ್ಕರ್​​ ಎಂಬುವವರ ಮೇಲೆ ಬಸವ ದಾಳಿ ಮಾಡಿ ಕೆಳಗೆ ಬೀಳಿಸಿದೆ. ಬಸವನ ಮೆರವಣಿಗೆ ವೇಳೆ ಎಸ್​​.ಐ ತುಂಬ ಸಮೀಪದಲ್ಲಿ ನಿಂತಿದ್ದರು. ಹೀಗಾಗಿ ಬಸವ ದಾಳಿ ಮಾಡಿದೆ. ಘಟನೆಯ ನಂತರವೂ ಮೆರವಣಿಗೆ ಮುಂದೆ ಸಾಗಿದ್ದರಿಂದ ಕೂಡಲೇ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ

Leave a Reply

Your email address will not be published. Required fields are marked *