ಬಸರೀಕಲ್​ ಚೆಕ್​​ಪೋಸ್ಟ್​ ಮೇಲೆ ಪೆಟ್ರೋಲ್​ ಬಾಂಬ್​ ಎಸೆದ ದುಷ್ಕರ್ಮಿಗಳು

ಚಿಕ್ಕಮಗಳೂರು: ಕುದುರೆಮುಖದ ಬಸರೀಕಲ್ ಅರಣ್ಯ ಇಲಾಖೆ ಚೆಕ್ ಪೋಸ್ಟ್ ಮೇಲೆ ದುಷ್ಕರ್ಮಿಗಳು ಪೆಟ್ರೋಲ್ ಬಾಂಬ್ ಎಸೆದ ಘಟನೆ ಇಂದು ಬೆಳಗಿನ ಜಾವ ನಡೆದಿದೆ.
ಕುದುರೆಮುಖ ರಾಷ್ಟ್ರೀಯ ಉದ್ಯಾನವನದಲ್ಲಿರುವ ಬಸರೀಕಲ್ ಚೆಕ್​​ಪೋಸ್ಟ್ ಬಳಿ ಅರಣ್ಯ ಸಿಬ್ಬಂದಿ ಕುಳಿತುಕೊಳ್ಳುತ್ತಿದ್ದರು. ಖಾಲಿ ಬಾಟಲಿಗೆ ಮರಳು ಮತ್ತು ಸೀಮೆ ಎಣ್ಣೆ ತುಂಬಿ ಬೆಂಕಿ ಹಚ್ಚಿ ಚೆಕ್​ಪೋಸ್ಟ್​ ಬಳಿ ಎಸೆದಿದ್ದಾರೆ. ಇದರ ಪರಿಣಾಮ ಅರಣ್ಯ ಸಿಬ್ಬಂದಿ ಬಳಿಯಿದ್ದ ರಿಜಿಸ್ಟರ್​ ಪುಸ್ತಕ ಭಸ್ಮಗೊಂಡಿದೆ.


Follow us on:

YouTube: firstNewsKannada  Instagram: firstnews.tv  Face Book: firstnews.tv  Twitter: firstnews.tv