ಬಹು ನಿರೀಕ್ಷಿತ ಬಸಣ್ಣಿ ಬಾ.. ವಿಡಿಯೋ ಸಾಂಗ್ ರಿಲೀಸ್!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಯಜಮಾನ ಈಗಾಗ್ಲೇ ಸ್ಯಾಂಡಲ್‌ವುಡ್‌ನಲ್ಲಿ ಅಬ್ಬರಿಸಿ ಬೊಬ್ಬಿರಿದು ಧೂಳೆಬ್ಬಿಸಿದೆ. ಚಿತ್ರದ ರಿಲೀಸ್‌ಗೂ ಮುನ್ನವೇ ಕಾವು ಹೆಚ್ಚಿಸಿದ್ದ ಹಾಡು ಬಸಣ್ಣಿ ಬಾ. ಈಗ ಬಸಣ್ಣಿ ಬಾ ವಿಡಿಯೋ ಸಾಂಗ್‌ ರಿಲೀಸ್ ಆಗಿದೆ.
ಯಜಮಾನ ತೆರೆಮೇಲೆ ಬರೋಕೂ ಮುನ್ನವೇ ಸಿನಿಮಾದ ಹಾಡುಗಳು ಸಖತ್ ಸದ್ದು ಮಾಡಿದ್ವು. ಯೂಟ್ಯೂಬ್‌ನಲ್ಲಂತೂ ದಾಖಲೆ ಮೇಲೆ ದಾಖಲೆ ಬರೆದಿದ್ವು. ಅದರಲ್ಲೂ ನಿಂತಲ್ಲೇ ಹೆಜ್ಜೆ ಹಾಕುವಂತೆ ಮಾಡಿದ್ದ ‘ಬಸಣ್ಣಿ ಬಾ….’ ಹಾಡು ಪ್ರೇಕ್ಷಕರನ್ನ ಥಿಯೇಟರ್‌ನಲ್ಲಿ ಎದ್ದು ಕುಣಿಸಿತ್ತು. ಈ ಹಾಡಿನಲ್ಲಿ ದರ್ಶನ್ ಮತ್ತು ತಾನ್ಯ ಹೋಪ್ ಸಖತ್ತಾಗಿ ಡ್ಯಾನ್ಸ್ ಮಾಡಿ ರಂಜಿಸಿದ್ರು.

ಈಗಾಗ್ಲೇ ಬಸಣ್ಣಿ ಬಾ ಲಿರಿಕಲ್ ವಿಡಿಯೋ 23 ಮಿಲಿಯನ್ ವೀಕ್ಷಣೆ ಕಂಡಿದೆ. ಇಂದು ರಿಲೀಸ್ ಆಗಿರೋ ವಿಡಿಯೋ ಸಾಂಗ್ ರಿಲೀಸ್ ಆಗಿ 5 ಗಂಟೆಯೊಳಗಾಗಲೇ 3 ಲಕ್ಷಕ್ಕೂ ಅಧಿಕ ಜನರು ನೋಡಿದ್ದಾರೆ. ಹರಿಕೃಷ್ಣ ಸಂಗೀತ ನೀಡಿದ್ದು, ಯೋಗರಾಜ್ ಭಟ್ ಸಾಹಿತ್ಯ ಬರೆದಿದ್ದಾರೆ. ಸ್ವತಃ ಹರಿಕೃಷ್ಣ ಮತ್ತು ವರ್ಷ ಬಿ ಸುರೇಶ್ ಹಾಡಿದ್ದಾರೆ. ಚಿತ್ರ ಬಾಕ್ಸ್‌ ಆಫಿಸ್‌ನಲ್ಲಿ ಚಿಂದಿ ಉಡಾಯಿಸಿತ್ತು. ಆದ್ರೆ ಚಿತ್ರದ ಹಾಡುಗಳ ಮೇಲಿನ ಕ್ರೇಜ್ ಮಾತ್ರ ಇನ್ನೂ ನಿಂತಿಲ್ಲ. ಥಿಯೇಟರ್‌ನಲ್ಲಿ ಬಸಣ್ಣಿ ನೋಡಿದವರು ಈಗ ಯಟ್ಯೂಬ್‌ನಲ್ಲಿ ಬಸಣ್ಣಿ ಬಳುಕಾಟ, ದರ್ಶನ್ ಡ್ಯಾನ್ಸ್ ನೋಡಿ ಖುಷಿ ಪಡ್ತಿದ್ದಾರೆ.