ದಾರಿ ಯಾವುದಯ್ಯ ಬಾಗಾ ಬೀಚ್​ಗೆ? ಜಿಪಿಎಸ್​ ನಂಬಿ ಮೋಸ ಹೋಗ್ಬೇಡಿ ಅಂತು ಬ್ಯಾನರ್

ಜಿಪಿಎಸ್​​ನಿಂದ ಸಾಕಷ್ಟು ಲಾಭ ಇದೆ. ಆದ್ರೆ ಕೆಲವೊಮ್ಮೆ ಅದರಿಂದ ಯಡವಟ್ಟುಗಳೂ ಆಗಿವೆ. ಜಿಪಿಎಸ್​ ನಂಬಿ ಹೋದವರು ಮಂಜುಗಟ್ಟಿದ ನದಿ ಹಾಗೂ ರೇಲ್ವೆ ಟ್ರ್ಯಾಕ್​​​​ ಮೇಲೆ ತಲುಪಿದ ಉದಾಹರಣೆಗಳಿವೆ. ಹೀಗೆ ಗೋವಾದಲ್ಲಿ ಜನ ಜಿಪಿಎಸ್​ ನಂಬಿ ತಪ್ಪಾದ ದಾರಿಯಲ್ಲಿ ಬಾಗಾ ಬೀಚ್​​ ಕಡೆ ಮುಖ ಮಾಡ್ತಿದ್ದಾರೆ. ಇದನ್ನ ತಡೆಯೋಕೆ ಇಲ್ಲಿನ ಜನ ವಿಶಿಷ್ಟ ಬ್ಯಾನರ್​​ವೊಂದನ್ನ ಹಾಕಿ ಜನ ದಾರಿ ತಪ್ಪದಂತೆ ಮುನ್ನೆಚ್ಚರಿಕೆ ನೀಡ್ತಿದ್ದಾರೆ. ಈ ಬ್ಯಾನರ್​​ನ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

“ನೀವು ಗೂಗಲ್​ ಮ್ಯಾಪ್​​ನಿಂದ ಮೂರ್ಖರಾಗಿದ್ದೀರ. ಈ ರಸ್ತೆ ಬಾಗಾ ಬೀಚ್​​ ಕಡೆಗೆ ಹೋಗಲ್ಲ” ಎಂದು ಬ್ಯಾನರ್​​ನಲ್ಲಿ ಮುನ್ನೆಚ್ಚರಿಕೆ ನೀಡಿದ್ದಾರೆ. ಇದರ ಜೊತೆಗೆ ಸರಿ ದಾರಿ ಯಾವುದು ಅಂತಾನೂ ತಿಳಿಸಿದ್ದು, “ಹಿಂದಿರುಗಿ ಹೋಗಿ, ಎಡಕ್ಕೆ ಟರ್ನ್​​ ತೆಗೆದುಕೊಳ್ಳಿ. ಇಲ್ಲಿಂದ ಬಾಗಾ ಬೀಚ್​ 1 ಕಿ.ಮೀ ದೂರ ಇದೆ” ಎಂದು ತಿಳಿಸಿದ್ದಾರೆ.

ಸುಮಂತ್​ ರಾಜಜ್​ ಅರಸ್​​ ಅನ್ನೋರು ಈ ಫೋಟೋವನ್ನ ಟ್ವಿಟರ್​​ನಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ ಇದನ್ನ ಗೂಗಲ್​ ಮ್ಯಾಪ್ಸ್​ ಗೆ ಟ್ಯಾಗ್​ ಮಾಡಿ, ಬಾಗಾ ಬೀಚ್​ಗೆ ದಾರಿ ಯಾವುದು ಎಂದು ಕೇಳಿದ್ದಾರೆ. ಪೋಸ್ಟ್​​ ನೋಡಿದ ಅನೇಕ ಜನ ನಮಗೂ ಗೂಗಲ್​ ಮ್ಯಾಪ್​​ನಿಂದ  ಈ ರೀತಿಯ ಅನುಭವಗಳು ಆಗಿವೆ ಎಂದಿದ್ದಾರೆ.