ಭೂಗತ ಪಾತಕಿಗೆ ತಾಯಿಯ ನೋಡಲು ಅವಕಾಶ

ಉಡುಪಿ: ಹಿಂಡಲಗಾ ಜೈಲಿನಲ್ಲಿ ಸಜೆಯಲ್ಲಿರುವ ಭೂಗತ ಪಾತಕಿ ಬನ್ನಂಜೆ ರಾಜ‌ನಿಗೆ ಮಾನವೀಯ ನೆಲೆಯಲ್ಲಿ ತನ್ನ ತಾಯಿಯನ್ನು ನೊಡಲು ಉಡುಪಿ ಜಿಲ್ಲಾ ನ್ಯಾಯಾಲಯ ಅವಕಾಶ ಕಲ್ಪಿಸಿದೆ. ಆ ಹಿನ್ನೆಲೆಯಲ್ಲಿ ಇಂದು ಪೊಲೀಸರು ಪಾತಕಿಯನ್ನು ಉಡುಪಿಗೆ ಕರೆತಂದಿದ್ದಾರೆ. ಭೂಗತ ಪಾತಕಿ ಬನ್ನಂಜೆ ರಾಜ 15 ಪ್ರಕರಣಗಳಲ್ಲಿ ಆರೋಪಿಯಾಗಿದ್ದು ವಿಚಾರಣೆ ಎದುರಿಸುತ್ತಿದ್ದಾನೆ.
ಇನ್ನು ಅವನ ತಾಯಿ ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ ಬನ್ನಂಜೆ ರಾಜನಿಗೆ ತಾಯಿಯನ್ನು ನೋಡಲು ಅವಕಾಶ ಕಲ್ಪಿಸಲಾಗಿದೆ. ಇಂದು ರಾತ್ರಿ ನಗರ ಠಾಣೆಯಲ್ಲೇ ಬನ್ನಂಜೆ ರಾಜನನ್ನು ಉಳಿಸಿಕೊಳ್ಳುವ ಪೊಲೀಸರು ಸೋಮವಾರ ಬೆಳಗ್ಗೆ ಮಲ್ಪೆ ಸಮೀಪ ಇರುವ ಆತನ ಮನೆಗೆ ಕರೆದೊಯ್ದು, ತಾಯಿಯ ಭೇಟಿಗೆ ಅವಕಾಶ ನೀಡಲಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv