ಬ್ಯಾಂಕ್ ವಿಲೀನ ಪ್ರಕ್ರಿಯೆ ಖಂಡಿಸಿ ದಾವಣಗೆರೆಯಲ್ಲಿ ಪ್ರೊಟೆಸ್ಟ್

ದಾವಣಗೆರೆ: ಬ್ಯಾಂಕ್ ಆಫ್ ಬರೋಡಾ, ವಿಜಯಾ ಬ್ಯಾಂಕ್ ಮತ್ತು ದೇನಾ ಬ್ಯಾಂಕ್ ವಿಲೀನ ಪ್ರಕ್ರಿಯೆ ಖಂಡಿಸಿ ದಾವಣಗೆರೆಯಲ್ಲಿ ಯುನೈಟೆಡ್ ಫಾರಮ್ ಆಫ್ ಬ್ಯಾಂಕ್ ಯುನಿಯನ್ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ನಗರದ ವಿಜಯಾ ಬ್ಯಾಂಕ್ ಎದುರು ನಡೆದ ಪ್ರತಿಭಟನೆಯಲ್ಲಿ ಐವತ್ತಕ್ಕೂ ಹೆಚ್ಚು ಬ್ಯಾಂಕ್ ಸಿಬ್ಬಂದಿ ಭಾಗಿಯಾಗಿದ್ದರು.

ಈ ವೇಳೆ ಮಾತನಾಡಿದ, ಯುನೈಟೆಡ್ ಫಾರಮ್ ಆಫ್ ಬ್ಯಾಂಕ್ ಯುನಿಯನ್ ಜಿಲ್ಲಾ ಸಂಚಾಲಕ ರಾಘವೇಂದ್ರ ನಾಯರಿ, ಕೇಂದ್ರ ಸರ್ಕಾರದ ನಿಬಂಧನೆಗಳಿಂದ ಸರ್ಕಾರಿ ಬ್ಯಾಂಕ್‌ಗಳಿಗೆ, ಪಬ್ಲಿಕ್ ಸೆಕ್ಟರ್ ಬ್ಯಾಂಕ್‌ಗಳಿಗೆ ನಷ್ಟ ಮಾಡ್ತಿದಾರೆ. ಖಾಸಗಿ ಬಂಡವಾಳ ಶಾಹಿಗಳು ಮಾಡಿರುವ ಸಾಲವನ್ನು ಸರಿ ತೂಗಿಸಲಿಕ್ಕೆ ಬ್ಯಾಂಕ್ ವಿಲೀನ ಮಾಡ್ತಿದಾರೆ. ಬ್ಯಾಂಕ್ ವಿಲೀನ ಪ್ರಕ್ರಿಯೆ ಕೈಬಿಡಬೇಕು. ಸಾಲ ಮರು ಪಾವತಿ ಮಾಡದೇ ಇರುವವರ ಮೇಲೆ ಕ್ರಿಮಿನಲ್‌ ಕೇಸ್‌ ಹೂಡಬೇಕು. ಹೋರಾಟದ ದಿಕ್ಕು ತಪ್ಪಿಸಲಿಕ್ಕೆ ಕೇಂದ್ರ ಸರ್ಕಾರ ಬ್ಯಾಂಕ್ ವಿಲೀನಿಕರಣದ ಕಡೆ ಹೋಗುತ್ತಿದ್ದಾರೆ. ಕೂಡಲೇ ಬ್ಯಾಂಕ್ ವಿಲೀನಿಕರಣ ಕೈಬಿಡಬೇಕು ಎಂದು ಪ್ರತಿಭಟನೆಕಾರರು ಒತ್ತಾಯಿಸಿದರು.

ದೇಶಾದ್ಯಂತ 80000 ಬ್ಯಾಂಕ್ ಶಾಖೆಗಳನ್ನು ಬಂದ್ ಮಾಡಿ ಮುಷ್ಕರ ಮಾಡಲಾಗುತ್ತಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: conatct@firstnews.tv