ರಾಜಕೀಯ ಎಂಟ್ರಿ ವದಂತಿ ತಳ್ಳಿಹಾಕಿದ ಡಿಸಿಪಿ ಅಣ್ಣಾಮಲೈ

ಬೆಂಗಳೂರು: ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ, ದಕ್ಷ ಅಧಿಕಾರಿ ಕೆ. ಅಣ್ಣಾಮಲೈ IPS ಗೆ ರಾಜೀನಾಮೆ ನೀಡಿ ರಾಜಕೀಯಕ್ಕೆ ಎಂಟ್ರಿ ಕೊಡಲಿದ್ದಾರೆ ಅನ್ನೋ ವದಂತಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡ್ತಿದೆ. ಆದ್ರೆ ಈ ಸುದ್ದಿಯನ್ನ ಸ್ವತಃ ಅಣ್ಣಾಮಲೈ ಅವರು ತಳ್ಳಿಹಾಕಿದ್ದು ಮಾಧ್ಯಮಗಳಿಗೆ  ಸ್ಪಷ್ಟನೆ ನೀಡಿದ್ದಾರೆ.

ಶುಭೋದಯ ಎಲ್ಲರಿಗೂ. ಎಲ್ಲರೂ ದಯವಿಟ್ಟು ಸ್ವಲ್ಪ ತಾಳ್ಮೆಯಿಂದಿರಬೇಕೆಂದು ಮನವಿ ಮಾಡುತ್ತೇನೆ. ನಾನು ನನ್ನ ನಿರ್ಧಾರವನ್ನ ಈ ಸಂಜೆ ನಿಮಗೆ ತಿಳಿಸುತ್ತೇನೆ. ನಾನು ರಾಜಕೀಯಕ್ಕೆ ಅಥವಾ ಎಲ್ಲಿಗೂ ಸೇರಿಕೊಳ್ಳುತ್ತಿಲ್ಲ. ಧನ್ಯವಾದಗಳು’

-ಕೆ ಅಣ್ಣಾಮಲೈ

ಹೀಗೆ ಹೇಳಿರೋ ಅಣ್ಣಾಮಲೈ, ಇದೇ ವಿಚಾರವಾಗಿ ಇಂದು ಸಂಜೆ ಸುದ್ದಿಗೋಷ್ಟಿ ನಡೆಸಲಿದ್ದಾರೆ ಅಂತಾ ತಿಳಿದುಬಂದಿದೆ. ರಾಜೀನಾಮೆ ವಿಚಾರವಾಗಿ ಇಂದು ಸಂಜೆಯೊಳಗೆ ಅವರು ನಿರ್ಧಾರ ತಿಳಿಸುವುದಾಗಿ ಹೇಳಿದ್ದಾರೆ. ಆದ್ರೆ ನಾನು ರಾಜಕೀಯಕ್ಕೆ ಹೋಗುತ್ತಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಅಣ್ಣಾಮಲೈ ತಮಿಳುನಾಡು ರಾಜಕೀಯಕ್ಕೆ ಎಂಟ್ರಿ ಕೊಡಲಿದ್ದಾರೆ. ಸಾಮಾಜಿಕ‌ ಸೇವೆಯಲ್ಲಿ ಮತ್ತಷ್ಡು ತೊಡಗಿಸಿಕೊಳ್ಳುವ ಉದ್ದೇಶದಿಂದ IPS ತೊರೆದು ರಾಜಕೀಯಕ್ಕೆ ಬರಲಿದ್ದಾರೆ, ಇನ್ನು ಕೆಲವೇ ದಿನಗಳಲ್ಲಿ ರಾಜೀನಾಮೆ ನೀಡಲಿದ್ದಾರೆ ಎಂದೆಲ್ಲಾ ಸುದ್ದಿಯಾಗಿತ್ತು. ಇದು ಎಲ್ಲರಲ್ಲೂ ಅಚ್ಚರಿ ಮೂಡಿಸಿತ್ತು. ಈಗಾಗಲೇ ಸಮಾಜದಲ್ಲಿ ಖಡಕ್ ಪೊಲೀಸ್ ಅಧಿಕಾರಿ ಅಂತಾ ಕರೆಸಿಕೊಂಡಿರೋ ಅವರು, ಕರ್ನಾಟಕದ ಸಿಂಗಂ ಅಂತಾನೇ ಫೇಮಸ್ ಆಗಿದ್ದಾರೆ. ವೃತ್ತಿಪರತೆ, ಭ್ರಷ್ಟಾಚಾರ ಮುಕ್ತ ಅಧಿಕಾರಿ ಎನ್ನುವ ಹೆಗ್ಗಳಿಕೆ ಇವರಿಗಿದೆ.

2011ರ ಐಪಿಎಸ್​​ ಬ್ಯಾಚ್​ನವರಾದ ಅಣ್ಣಾಮಲೈ 2013ರಲ್ಲಿ ಕಾರ್ಕಳದ ಎಎಸ್​​ಪಿ ಆಗಿ ನೇಮಕಗೊಂಡರು. ನಂತರ ಚಿಕ್ಕಮಗಳೂರು ಎಸ್​ಪಿ ಆದರು. ಸುಮಾರು ಹತ್ತು ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ಅಣ್ಣಾಮಲೈ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಬೆಂಗಳೂರು ದಕ್ಷಿಣ ಡಿಸಿಪಿಯಾಗಿ ಅವರು ಸೇವೆ ಸಲ್ಲಿಸುತ್ತಿದ್ದಾರೆ.

Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv