ಪಶ್ಚಿಮಬಂಗಾಳದಲ್ಲಿ ವಿದೇಶಿ ಆ್ಯಕ್ಟರ್​​ ಕರೆಸಿ ಎಲೆಕ್ಷನ್ ಪ್ರಚಾರ

ಕೊಲ್ಕತ್ತಾ: ಲೋಕಸಭಾ ಚುನಾವಣೆ ಹಿನ್ನೆಲೆ ದೇಶದಲ್ಲೆಲ್ಲಾ ಸ್ಟಾರ್​ ಪ್ರಚಾರಕರನ್ನು ಕರೆಸಿ ಕ್ಯಾಂಪೇನ್​ ಮಾಡಿಸಿ, ಚುನಾವಣೆಯಲ್ಲಿ ಗೆಲ್ಲಲು ಅಭ್ಯರ್ಥಿಗಳು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಆದ್ರೆ, ಪಶ್ಚಿಮ ಬಂಗಾಳದಲ್ಲಿ ನಡೀತಿರುವ ಚುನಾವಣಾ ಪ್ರಚಾರವೊಂದು ವಿವಾದಕ್ಕೆ ಕಾರಣವಾಗಿದೆ. ನೆರೆ ರಾಷ್ಟ್ರ ಬಾಂಗ್ಲಾದೇಶದ ನಟ ಫೆರ್ಡಸ್​ ಅಹ್ಮದ್​​ರನ್ನ ಕರೆಸಿ ಪ್ರಚಾರ ನಡೆಸಿರೋದು ವಿವಾದ ಎಬ್ಬಿಸಿದೆ. ಟಿಎಂಸಿ ಅಭ್ಯರ್ಥಿ ಕನ್ನಯ್ಯ ಲಾಲ್​ ಅಗರ್ವಾಲ್​ ಪರ ರಾಯ್​ಗಂಜ್​ ಕ್ಷೇತ್ರದಲ್ಲಿ ಫೆರ್ಡಸ್​​ ಪ್ರಚಾರ ನಡೆಸುತ್ತಿದ್ದು, ಇದು ವಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದೆ.

ಫೆರ್ಡಸ್​​ ಉತ್ತರ ದಿನಜ್​ಪುರ್​ನ ಕರಾಂಢಿಗಿ ಮತ್ತು ಚಕುಲಿಯಾ ಪ್ರದೇಶಗಲ್ಲಿ ಕ್ಯಾಂಪೇನ್​ ಮಾಡುತ್ತಿದ್ದಾರೆ. ಈ ಪ್ರದೇಶಗಳು ಗಡಿ ಪ್ರದೇಶವಾಗಿದ್ದರಿಂದ, ಇಲ್ಲಿ ಮುಸ್ಲಿಂ ಮತಗಳೇ ನಿರ್ಣಾಯಕವಾಗಿವೆ. ಇದರ ವಿರುದ್ಧ ತಿರುಗಿ ಬಿದ್ದಿರುವ ಬಿಜೆಪಿ, ನಾವೂ ಎಲ್ಲ ರಾಜಕೀಯವನ್ನ ನೋಡಿದ್ದೇವೆ. ಆದ್ರೆ, ವಿದೇಶಿ ಸ್ಟಾರ್​ ಒಬ್ಬರನ್ನ ಕರೆಸಿ, ಪ್ರಚಾರ ಮಾಡಿಸುತ್ತಿರೋದು ಇದೇ ಮೊದಲು. ಹಾಗೂ ತಪ್ಪು ಎಂದು ಕಿಡಿ ಕಾರಿದೆ. ಟಿಎಂಸಿ ನಾಯಕರು ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದು, ಇದರ ವಿರುದ್ಧ ದೂರು ನೀಡಿತ್ತೇವೆ ಎಂದು ಎಚ್ಚರಿಸಿದೆ.