ವನಿತೆಯರ ಗೆಲುವಿಗೆ ಸ್ಟೆಪ್​ ಹಾಕಿದ ನಾಗಿಣಿ ಬಾಯ್ಸ್​​!

ಬಾಂಗ್ಲಾ ಹಾಗೂ ಇಂಡಿಯಾ ಕ್ರಿಕೆಟ್​ ಟೀಮ್​​​ಗಳು ಬದ್ಧ ವೈರಿಗಳೇನಲ್ಲ. ಆದ್ರೆ, ಬಾಂಗ್ಲಾ ಮಾತ್ರ ಭಾರತ ವಿರುದ್ಧದ ಪ್ರತಿ ಗೆಲುವನ್ನೂ ಅತಿರೇಕವೆಂಬಂತೆ ಆಚರಣೆ ಮಾಡುತ್ತೆ. ಕಳೆದ ಮಾರ್ಚ್​ನಲ್ಲಿ ನಡೆದ ಟಿ20 ತ್ರಿಕೋನ ಸರಣಿಯಲ್ಲಂತೂ ಬಾಂಗ್ಲಾದ ನಾಗಿಣಿ ಡ್ಯಾನ್ಸ್​ ಸಿಕ್ಕಾಪಟ್ಟೆ ವೈರಲ್​ ಆಗಿತ್ತು. ಟೂರ್ನಿಯುದ್ದಕ್ಕೂ ನಾಗಿಣಿ ಡ್ಯಾನ್ಸ್​ ಮಾಡಿಕೊಂಡು ಬಂದಿದ್ದ ಬಾಂಗ್ಲಾ, ರೋಹಿತ್​ ಪಡೆಯ ಎದುರು ಫೈನಲ್​ನಲ್ಲಿ ಮುಗ್ಗರಿಸಿತ್ತು. ಅದರಲ್ಲೂ, ಕೊನೆಯ ಓವರ್​ನಲ್ಲಿ ದಿನೇಶ್​ ಕಾರ್ತಿಕ್​ರ ಮುಗಿಲೆತ್ತರದ ಹೊಡೆತಗಳು ನಾಗಿಣಿ ಡ್ಯಾನ್ಸ್​​ಗೆ ಪುಂಗಿ ಬಂದ್​ ಮಾಡಿತ್ತು. ಇದೆಲ್ಲಾ ಹಳೆಯ ಕಥೆ. ದರೆ ಇದೀಗ ಅದೇ ಬಾಂಗ್ಲಾ ಟೀಮ್​ ಮತ್ತೆ ಸುದ್ದಿಯಲ್ಲಿದೆ. ಇದಕ್ಕೆ ಕಾರಣ ಮಹಿಳೆಯರ ಎಷ್ಯಾ ಕಪ್​ ಟೂರ್ನಿ.

ಹೌದು, ನಿನ್ನೆ ತಾನೇ ಮುಕ್ತಾಯವಾದ ಮಹಿಳೆಯರ ಟಿ20 ಏಷ್ಯಾ ಕಪ್​ ಟೂರ್ನಿಯಲ್ಲಿ, ಭಾರತವು 3 ವಿಕೆಟ್​ಗಳಿಂದ ಬಾಂಗ್ಲಾದೇಶಕ್ಕೆ ಶರಣಾಯಿತು. ಈ ವೇಳೆ ಬಾಂಗ್ಲಾದ ಪುರುಷರ ತಂಡ, ತಮ್ಮ ದೇಶದ ವನಿತೆಯರ ಗೆಲುವಿಗಾಗಿ ಡ್ರೆಸ್ಸಿಂಗ್​ ರೂಮ್​ನಲ್ಲಿ ಪ್ರಾರ್ಥನೆ ಆರಂಭಿಸಿತ್ತು. ಅದು ಕೊನೆಯ ಒವರ್​. ಬಾಂಗ್ಲಾ ಗೆಲುವಿಗೆ ಬೇಕಾಗಿದ್ದು 9 ರನ್​. ಈ ನಡುವೆ ಸಮಯೋಚಿತ ಬ್ಯಾಟಿಂಗ್ ಪ್ರದರ್ಶನ ನಡೆಸಿದ ಬಾಂಗ್ಲಾ 5 ಎಸೆತಗಳಲ್ಲಿ 7 ರನ್​ ಗಳಿಸಲಷ್ಟೇ ಶಕ್ತವಾಯಿತು. ಬಾಕಿ ಉಳಿದ ಒಂದು ಎಸೆತದಲ್ಲಿ ಬಾಂಗ್ಲಾ ಗೆಲುವಿಗೆ ಬೇಕಾಗಿದ್ದು ಕೇವಲ 2 ರನ್​. ಗೆಲುವು ಡೋಲಾಯಮಾನವಾಗಿದ್ದರಿಂದ, ಡ್ರೆಸ್ಸಿಂಗ್​ ರೂಮ್​​ನಲ್ಲಿದ್ದ ನಾಗಿನ್​ ಬಾಯ್ಸ್​ಗಳು ಕೂಡ ಗಪ್​ಚುಪ್​ ಆಗಿ ಟಿವಿ ನೋಡುತ್ತಿದ್ದರು.

ಹರ್ಮನ್​ಪ್ರೀತ್​ ಕೌರ್​​ಳ ಕೊನೆಯ ಎಸೆತದಲ್ಲಿ 2 ರನ್​ ಕದ್ದ ಬಾಂಗ್ಲಾ, ಚೊಚ್ಚಲ ಏಷ್ಯಾಕಪ್​ಗೆ ಮುತ್ತಿಕ್ಕಿತು. ಕ್ರೀಡಾಂಗಣದಲ್ಲಿ ಬಾಂಗ್ಲಾ ವನಿತೆಯರ ಸಂಭ್ರಮ ಮುಗಿಲು ಮುಟ್ಟಿದರೆ, ಇತ್ತ ಡ್ರೆಸ್ಸಿಂಗ್​ ರೂಂನಲ್ಲಿದ್ದ ನಾಗಿಣಿ ಬಾಯ್ಸ್​ ಭರ್ಜರಿ ಸ್ಟೆಪ್​​ ಹಾಕಿ ಖುಷಿಪಟ್ಟರು. ಈ ವಿಡಿಯೋವನ್ನ ಬಾಂಗ್ಲಾ ಟೀಮ್​ ಕ್ಯಾಪ್ಟನ್​ ತಮೀಮ್​ ಇಕ್ಬಾಲ್​ ಇನ್ಸ್​ಟಾಗ್ರಾಮ್​ನಲ್ಲಿ ಶೇರ್​ ಮಾಡಿದ್ದು ಸಿಕ್ಕಾಪಟ್ಟೆ ವೈರಲ್​​ ಆಗಿದೆ.

Well done 👍 girls

A post shared by Tamim Iqbal (@tamimofficial) on

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv