‘ನರೇಂದ್ರ ಮೋದಿ ಪ್ರಧಾನಿಯಾಗೋದು ನನಗೆ ಇಷ್ಟವಿಲ್ಲ’ ಪ್ರಕಾಶ್​ ರೈ ಘೋಷಣೆ

ಬೆಂಗಳೂರು: ನರೇಂದ್ರ ಮೋದಿ ಪ್ರಧಾನಿ ಆಗೋದು ನನಗೆ ಇಷ್ಟ ಇಲ್ಲಾ ಅಂತಾ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಪ್ರಕಾಶ್​ ರೈ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ನನ್ನ ಮತ್ತು ಮೋದಿ ನಡುವೆ ಯಾವುದೇ ದ್ವೇಷ ಇಲ್ಲಾ. ಆದ್ರೆ ಆರಂಭದಲ್ಲಿ ನಾನು ಅವರ ಮಾತನ್ನ ನಂಬಿದ್ದೆ. ಉದ್ಯೋಗ ಸೃಷ್ಟಿ ಸೇರಿದಂತೆ ಕೆಲವು ವಿಚಾರ ಬಗ್ಗೆ ಮಾತಾಡಿದ್ರು. ಆದ್ರೆ ಅದು ಆಗಿಲ್ಲ. ಪ್ರಧಾನಿಯನ್ನ ಜನರು ಆರಿಸಲ್ಲ. ಕ್ಷೇತ್ರದ ಅಭ್ಯರ್ಥಿಯನ್ನು ಮಾತ್ರ ಆಯ್ಕೆ ಮಾಡ್ತಾರೆ. ಬಿಜೆಪಿ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಲ್ಲ ಎಂದರು. ಇನ್ನು ನಾನು ಹಿಂದು ವಿರೋಧಿಯಲ್ಲ. ಆ ರೀತಿ ಏನಾದರೂ ವಿಡಿಯೋ ಇದ್ರೆ ತೋರಿಸಿ. ನನ್ನನ್ನು ಒಂದು ಪಂಗಡಕ್ಕೆ ಸೀಮಿತ ಮಾಡಿದ್ದಾರೆ ಅಂತಾ ಪ್ರಕಾಶ್​ ರೈ ಹೇಳಿದ್ರು.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv