‘ಇವ್ರು ಸಿನಿಮಾ ಹಿರೋ ಅಲ್ಲ, ಸಿಲಿಕಾನ್​ ಸಿಟಿಯ ಸಿಕ್ಸ್ ಪ್ಯಾಕ್ ಸೂಪರ್ ಕಾಪ್’

ಬೆಂಗಳೂರು: ಪೊಲೀಸ್ ಡಿಪಾರ್ಟ್​​ಮೆಂಟ್​​ ಅಂದ್ರೆ.. ಅದ್ರಲ್ಲೂ ಇನ್ಸ್​ಪೆಕ್ಟರ್ ಮಟ್ಟದ ಅಧಿಕಾರಿಗಳು ಅಂದ್ರೆ ಓಡಾಡೋಕೆ‌ ಕಾರು, ಐಷಾರಾಮಿ ಜೀವನ ಅದ್ರ ಜೊತೆಗೆ ಸ್ವಲ್ಪ ವಯಸ್ಸಾಗ್ತಿದ್ದಾಗೆ ಪೊಲೀಸ್ರು ದಪ್ಪ ಹೊಟ್ಟೆ ಇರುತ್ತೆ ಅನ್ನೊ ಮಾತುಗಳೇ ಕೇಳಿಬರುತ್ತೆ. ಅಂತಹವರ ಮಧ್ಯೆ ಡ್ಯೂಟಿಯ ಜೊತೆ ಜೊತೆಗೆ ತಮ್ಮ ಬಿಡುವಿನ ವೇಳೆಯಲ್ಲಿ‌ ಜಿಮ್ ನಲ್ಲಿ ಫುಲ್ ವರ್ಕೌಟ್ ಮಾಡೋದ್ರ ಮೂಲಕ ಇಲ್ಲೊಬ್ಬ ಪೊಲೀಸ್ ಆಫೀಸರ್ ಸಿಕ್ಸ್ ಪ್ಯಾಕ್ ಬಾಡಿಬಿಲ್ಡ್ ಮಾಡಿದ್ದಾರೆ. ಅದು ಬೇರೆ ಯಾರು ಅಲ್ಲ ಬನಶಂಕರಿ ಪೊಲೀಸ್ ಠಾಣೆ ಸಬ್ ಇನ್ಸ್​ಪೆಕ್ಟರ್ ಅರ್ಜು‌ನ್.

ಅರ್ಜುನ್ ಸಿಆರ್​​, 2009ರ ಬ್ಯಾಚ್ ನಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಗೆ ಸಬ್ ಇನ್ಸ್​ಪೆಕ್ಟರ್ ಆಗಿ ಆಯ್ಕೆಯಾದವರು. ನಂತ್ರ, ಬೆಂಗಳೂರು‌ ಸಿಟಿಯ ಹಲವು ಪೊಲೀಸ್ ಠಾಣೆಗಳಲ್ಲಿ ಕಾರ್ಯ ನಿರ್ವಹಿಸಿರೋ ಅರ್ಜುನ್, ಸದ್ಯ ಬನಶಂಕರಿ ‌ಪೊಲೀಸ್ ಠಾಣೆಯಲ್ಲಿ ಆರಕ್ಷಕ ಉಪನಿರೀಕ್ಷಕ ಗಿ ಕರ್ತವ್ಯ ನಿರ್ವಹಿಸ್ತಿದ್ದಾರೆ. ಸಮಾಜ ಕಾಯೋ ಪೊಲೀಸ್ ಡ್ಯೂಟಿ, ಜೊತೆಗೆ ಫ್ಯಾಮಿಲಿ‌ಗೂ ಟೈಮ್ ಕೊಡ್ತಾ.. ಸಬ್ ಇನ್ಸ್​ಪೆಕ್ಟರ್ ಅರ್ಜುನ್ ಇವತ್ತು ಸಿಕ್ಸ್ ಪ್ಯಾಕ್ ಬಿಲ್ಡ್ ಮಾಡಿರೋದೆ ಒಂದು ರೋಚಕ ಕತೆ.

1.ಸಿಕ್ಸ್ ಪ್ಯಾಕ್ ಮಾಡಲು ಕಾರಣ ಆಗಿದ್ದು ಆ ಒಂದು ಇಂಜ್ಯುರಿ:
ಸಬ್ ಇನ್ಸ್​ಪೆಕ್ಟರ್ ಅರ್ಜುನ್ ಕಾಲೇಜು ದಿನಗಳಿಂದ ಉತ್ತಮ ಕ್ರೀಡಾಪಟು. ಅದ್ರಲ್ಲೂ ಕಬಡ್ಡಿ ಅಂದ್ರೆ ಕೊಂಚ ಹೆಚ್ಚು ಆಸಕ್ತಿ. ಪೊಲೀಸ್ ಅಧಿಕಾರಿ ಆದಮೇಲೂ ಕೂಡ ಕಬಡ್ಡಿ ಮೇಲಿನ ತಮ್ಮ ಒಲವನ್ನ ಮುಂದುವರೆಸಿದ್ರು. ಹೀಗೆ 2014 ರಲ್ಲಿ‌ ನಡೆದ ಕಬಡ್ಡಿ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಅರ್ಜುನ್, ರೈಡ್ ಮಾಡ್ತಿರೋ ವೇಳೆ ಗಾಯಗೊಂಡು ತಮ್ಮ ಬಲಗಾಲಿಗೆ ಎಸಿಎಲ್ ಟೇರ್ ಆಪರೇಷನ್​ಗೆ ತುತ್ತಾದರು. ನಂತ್ರ ಅವರ ದೇಹ ತೂಕ ಹೆಚ್ಚಾಗ್ತಾ ಹೋಗಿದ್ದೇ ಅರ್ಜುನ್ ಇಂದು ಸಿಕ್ಸ್ ಪ್ಯಾಕ್ ಹೊಂದಿರೋ ಪೊಲೀಸ್ ಆಫೀಸರ್ ಆಗುವಂತೆ ಮಾಡಿದೆ.

2. ರಾತ್ರಿ 11ಕ್ಕೆ ಶುರುವಾಗ್ತಿದ್ದ ವರ್ಕೌಟ್ ತಡರಾತ್ರಿಯಾದ್ರು ಮುಂದುವರಿತಿತ್ತು:
ಪೊಲೀಸ್ ಸ್ಟೇಷನ್ ಯಾವತ್ತೂ ಬಾಗಿಲು ಹಾಕಬಾರದು. ಹಾಗೆಯೇ, ಪೊಲೀಸರೂ ಸದಾ ಎಚ್ಚರಿಕೆಯಿಂದಾನೆ ಇರಬೇಕು ಅನ್ನೊ ಮಾತಿನಂತೆ  ಇನ್ಸ್​ಪೆಕ್ಟರ್ ಅರ್ಜುನ್ ಬೆಳಗಿನ ಸಮಯವೆಲ್ಲಾ ಪೊಲೀಸ್ ಠಾಣೆ, ಕೇಸುಗಳ ವಿಚಾರಣೆ, ಹೀಗೆ ಜನರ ಸಮಸ್ಯೆಗಳ ಬಗ್ಗೆ ಕರ್ತವ್ಯ ನಿರತರಾಗಿರ್ತಾರೆ. ಹೀಗಾಗಿ ಅವರ ವರ್ಕೌಟ್ ಶುರುವಾಗ್ತಿದ್ದದ್ದು ತಡರಾತ್ರಿ 11ರ ನಂತರ.

ರಾತ್ರಿ 11ಕ್ಕೆ ವಸಂತಪುರದ ಈಗಲ್ ಫಿಟ್ ನೆಸ್ ಜಿಮ್‌ನಲ್ಲಿ ವರ್ಕೌಟ್ ಮಾಡಲು ಶುರುವಾದ್ರೆ ರಾತ್ರಿ 1 ರವರೆಗೂ ವರ್ಕೌಟ್ ಮುಂದುವರೆಯುತ್ತಿತ್ತು. ಸಬ್ ಇನ್ಸ್​ಪೆಕ್ಟರ್ ಅರ್ಜುನ್ ಸಿಕ್ಸ್ ಪ್ಯಾಕ್ ಹಿಂದೆ ಈಗಲ್ ಫಿಟ್ ನೆಸ್ ಜಿಮ್‌ನ ಕೋಚ್ ವಿಶ್ವಾಸ್​ ಅವರ ಸಹಕಾರವಿದ್ದು ಕೆಲವೊಮ್ಮೆ ರಾತ್ರಿ ವೇಳೆ ಅರ್ಜುನ್ ಅವ್ರು ಕೆಲಸದ ನಿಮಿತ್ತ ವರ್ಕೌಟ್ ಮಾಡಲು ಬರುವುದು ತಡವಾದ್ರೆ ನಿಮಗೆ ರಾತ್ರಿ ಸಮಯ ಸಿಕ್ಕಾಗ ಬಂದು ಎಕ್ಸರ್​​ಸೈಜ್​​ ಮಾಡಿ ಅಂತ ಹಲವು ಬಾರಿ‌ ಜಿಮ್‌ನ ಕೀ ರಾತ್ರಿ ವೇಳೆ ಅರ್ಜುನ್​ಗೆ ‌ನೀಡ್ತಿದ್ರು.

3.ಕೇವಲ ಏಳೇ ತಿಂಗಳಲ್ಲಿ ಸಿಕ್ಸ್ ಪ್ಯಾಕ್..!
ಮನಸ್ಸಿಟ್ಟು, ಶ್ರಮವಹಿಸಿ ಮಾಡಿದ್ರೆ ಯಾವುದೂ ಅಸಾಧ್ಯವಲ್ಲ ಅನ್ನೊ ‌ಮಾತಿದೆ. ಅದ್ರಂತೆ ಇನ್ಸ್​ಪೆಕ್ಟರ್ ಅರ್ಜುನ್ ಪೊಲೀಸ್ ಇಲಾಖೆಗೆ ಸೇರಿ ಸರಿಸುಮಾರು 10 ವರ್ಷಗಳು ಕಳೆದಿವೆ. ಆದ್ರೆ ಕಳೆದ ಆಗಸ್ಟ್ ನಿಂದ ಅವರು ಜಿಮ್‌ನಲ್ಲಿ ವರ್ಕೌಟ್ ಮಾಡಲು ಶುರು ಮಾಡಿದ್ರು. ಕೆಲವರು ತಮ್ಮ ದೇಹವನ್ನ ವರ್ಷಗಳ ಕಾಲ ‌ದಂಡಿಸಿದರೂ ಸಿಕ್ಸ್ ಪ್ಯಾಕ್‌ ಮಾಡಲಾಗದೇ ವರ್ಕೌಟ್ ಮುಂದುವರೆಸ್ತಾರೆ. ಹೀಗಿರೋವಾಗ ಇಷ್ಟು ಕಡಿಮೆ ಅವಧಿಯಲ್ಲಿ ಸಿಕ್ಸ್ ಪ್ಯಾಕ್ ಬರೋದಕ್ಕೆ ಡೆಡಿಕೇಶನ್ ಬಿಟ್ಟು ಬೇರೆನಿಲ್ಲ ಅಂತಾರೆ ಸೂಪರ್ ಕಾಪ್ ಅರ್ಜುನ್.

 

ಸೌಮ್ಯ, ಅರ್ಜುನ್​ ಪತ್ನಿ

4. ವರ್ಕೌಟ್ ಮಾಡಿದ್ರೆ ಸಾಲದು ಕುಟುಂಬದವರ ಸಪೊರ್ಟ್ ಕೂಡ ಬೇಕು:
ಬಾಡಿಬಿಲ್ಡ್ ಮಾಡೊದಾಗ್ಲಿ ಸಿಕ್ಸ್ ಪ್ಯಾಕ್ ಬರಿಸೋದಾಗ್ಲಿ‌ ಸುಲಭದ ಮಾತಲ್ಲ ಅದ್ರಲ್ಲೂ ಒಬ್ಬ ಕರ್ತವ್ಯ ನಿರತ ಪೊಲೀಸ್ ಅಧಿಕಾರಿ ಬಾಡಿಬಿಲ್ಡ್ ಮಾಡಿ ಯಾವ ಫಿಲ್ಮ್ ಹೀರೋಗಿಂತ ಕಡಿಮೆ ಇಲ್ಲ ಅನ್ನೊ ರೀತಿ‌ ಸಿಕ್ಸ್ ಪ್ಯಾಕ್‌ ಬರಿಸೋದಂದ್ರೆ ಅದು ಸುಲಭದ ಮಾತಲ್ಲ. ಯಾಕಂದ್ರೆ ಒಬ್ಬ ಪೊಲೀಸ್ ಅಧಿಕಾರಿ ಅಂದ್ರೆ ಕರ್ತವ್ಯದ ಜೊತೆಗೆ ಫ್ಯಾಮಿಲಿಗೆ ಟೈಮ್ ಕೊಡೋದು‌ ಕಡಿಮೆ ಅನ್ನೊ ಮಾತುಗಳು‌ ಸಾಮಾನ್ಯವಾಗಿ ಕೇಳಿಬರತ್ತೆ. ಅದ್ರಂತೆ ಸಬ್ ಇನ್ಸ್​ಪೆಕ್ಟರ್ ಅರ್ಜುನ್‌ ಇವತ್ತು ಈ‌ ರೀತಿ ತಮ್ಮ ದೇಹವನ್ನ ಹುರುಗೊಳಿಸುವಲ್ಲಿ ಅವರ ಕುಟುಂಬದವರ ಸಪೊರ್ಟ್‌ ಕೂಡ ಹೆಚ್ಚಿದೆ.

ಅದ್ರಲ್ಲೂ ಅರ್ಜುನ್​ರ ಪತ್ನಿ ಸೌಮ್ಯ ತಮ್ಮ ಪತಿಯ ಆಸೆಗೆ ಎಂದು‌ ಅಡ್ಡಿಬಾರದೇ, ನೀವ್ ನಂಗೆ ಟೈಂ ಕೊಡ್ತಿಲ್ಲ, ಫಿಲ್ಮಗೆ ಶಾಫಿಂಗ್​ಗೆ ಕರೆದೊಯ್ತಿಲ್ಲ ಅಂತ ಎಂದು ಕೇಳಿಲ್ಲ. ಬದಲಾಗಿ ತಮ್ಮ ಪತಿ ತಡರಾತ್ರಿ ಒಂದು ಘಂಟೆಗೆ ಜಿಮ್‌ನಿಂದ ವರ್ಕೌಟ್ ಮುಗಿಸಿ ಬಂದಾಗ್ಲೂ ‍ಚಿಕನ್ ಹಾಗೂ ಡಯೆಟ್ ಫುಡ್​ ಅನ್ನೇ ಮಾಡಿ ಬಡಿಸಿದ್ರು. ಅಷ್ಟೇ ಅಲ್ಲದೇ ಅರ್ಜುನ್ ಡಯೆಟ್ ನಲ್ಲಿ ಇರೋದ್ರಿಂದ ಮನೆಯಲ್ಲಿ ಯಾರು ಕೂಡ ಮಸಾಲೆ ಪದಾರ್ಥದ ಅಡುಗೆಯನ್ನ ಸೇವಿಸಿದೇ ಇನ್ಸ್​ಪೆಕ್ಟರ್ ಅರ್ಜುನ್ ಫಿಟ್ ಅಂಡ್ ಫೈನ್ ಆಗಿ ಸಿಕ್ಸ್ ಪ್ಯಾಕ್ ಮಾಡುವಂತೆ ನೋಡಿಕೊಂಡಿದ್ದಾರೆ.

 

ಇತ್ತೀಚಿನ ದಿನಗಳಲ್ಲಿ ಕೆಲ್ಸ, ಆಫೀಸ್ ಪ್ರೆಷರ್ ಅಂತ ತಮ್ಮ ವಯಸ್ಸು ಇನ್ನೇನು 30ರ ಗಡಿ ದಾಟುತ್ತಿದ್ದಂತೆ ಹೊಟ್ಟೆಯನ್ನ ಮುಂದಕ್ಕೆ ಬರಿಸಿಕೊಳ್ಳೊ ಯುವಕರಿಗೆ ತಮ್ಮ ಪೊಲೀಸ್ ಕೆಲ್ಸದ ಮಧ್ಯೆಯೂ ಬಿಡುವಿನ ವೇಳೆಯಲ್ಲಿ‌ ಕಠಿಣ ಪರಿಶ್ರಮದ ಮೂಲಕ ಯಾವ ಫಿಲ್ಮ್ ಸ್ಟಾರ್ ಗೂ ಕಡಿಮೆ ಇಲ್ಲಾ ಅನ್ನೊ ರೀತಿಯಲ್ಲಿ ಸಿಕ್ಸ್ ಪ್ಯಾಕ್‌ ಮಾಡಿರೋ ಸೂಪರ್ ಕಾಪ್‌ ಅರ್ಜುನ್, ದೇಹವನ್ನ ಫಿಟ್ ನೆಸ್ ಆಗಿ ಇರಿಸಿಕೊಳ್ಳಬೇಕು ಅಂತ ಬಯಸೋ ಯುವಕರಿಗೆ ರೋಲ್‌ ಮಾಡೆಲ್ ಆಗಿ‌ ನಿಂತಿದ್ದಾರೆ.

ವಿಶೇಷ ವರದಿ: ಶಿವಕುಮಾರ್ ಕೃಷ್ಣಮೂರ್ತಿ, ಕ್ರೈಂ ಬ್ಯೂರೋ, ಫಸ್ಟ್​ ನ್ಯೂಸ್​


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv