ಬಂಡಿಪುರ ಅರಣ್ಯದ ಕಾರಿಡಾರ್ ಯೋಜನೆ ಸ್ಥಗಿತ-ಸಚಿವ ಆರ್. ಶಂಕರ್

ಕೊಪ್ಪಳ: ಚಾಮರಾಜನಗರ ಜಿಲ್ಲೆಯ ಬಂಡಿಪುರ ಅರಣ್ಯದ ಕಾರಿಡಾರ್ ನಿರ್ಮಾಣ ಪ್ರಸ್ತಾವನೆ ಕೈಬಿಡಲಾಗಿದೆ ಅಂತಾ ಕೊಪ್ಪಳ ಜಿಲ್ಲಾ ಉಸ್ತುವಾರಿ ಹಾಗೂ ಅರಣ್ಯ, ಪರಿಸರ, ಜೀವಿಶಾಸ್ತ್ರ ಇಲಾಖೆಯ ಸಚಿವ ಆರ್. ಶಂಕರ್ ಹೇಳಿದ್ದಾರೆ.
ನಗರದ ಕಾಸನಕಂಡಿ ಬಳಿಯ ಸಾಲುಮರದ ತಿಮ್ಮಕ ಟ್ರೀ ಪಾರ್ಕ್ ಉದ್ಘಾಟಿಸಿ ಮಾತನಾಡಿದ ಅವರು, ಸುಮಾರು ₹ 400 ಕೋಟಿ ರೂ ಕಾರಿಡಾರ್ ಯೋಜನೆಯನ್ನು ಕೈ ಬಿಡಲಾಗಿದೆ. ಅಲ್ಲದೇ ರಾತ್ರಿ ವೇಳೆಯಲ್ಲಿ ರಸ್ತೆ ಸಂಚಾರವನ್ನು ಕೂಡ ನಿಷೇಧಿಸಲಾಗಿದೆ ಅಂತಾ ತಿಳಿಸಿದರು. ನಮ್ಮ ರಾಜ್ಯದ ಅರಣ್ಯ ಪ್ರದೇಶ ಹಾಗು ಹಸಿರೀಕರಣಕ್ಕೆ ₹ 2,000 ಕೋಟಿ ನೀಡಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಅಂತಾ ತಿಳಿಸಿದರು.

ಇದೇ ವೇಳೆ, ಕೊಪ್ಪಳ ಜಿಲ್ಲೆಯಲ್ಲಿ 50% ಕ್ಕೂ ಹೆಚ್ಚು ಬೆಳೆ ಹಾನಿಯಾಗಿದೆ. ಕೊಪ್ಪಳ ಜಿಲ್ಲೆಯನ್ನು ಬರಪೀಡಿತ ಜಿಲ್ಲೆ ಎಂದು ಘೋಷಣೆ ಮಾಡಲು ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತೇನೆ ಅಂತಾ ತಿಳಿಸಿದರು. ಉತ್ತರ ಕರ್ನಾಟಕ ಗಿಡ ಮರಗಳಿಂದ ವಂಚಿತವಾಗಿದೆ. ಇಲ್ಲಿನ ಪರಿಸರ ಹಾಗು ಮರಗಿಡಗಳ ಬೆಳೆಸುವುದಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಕೊಪ್ಪಳದ ಭಾಗದಲ್ಲಿ ಫ್ಯಾಕ್ಟರಿಗಳಿಂದ ಮಾಲಿನ್ಯ ಹೆಚ್ಚು ಉಂಟಾಗುತ್ತಿದೆ. ಇದನ್ನು ತಡೆಗಟ್ಟುವುದಕ್ಕೆ ಅಧಿಕಾರಿಗಳಿಗೆ ಆದೇಶ ನೀಡಲಾಗುವುದು ಅಂತಾ ಹೇಳಿದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv