ಕರ್ನಾಟಕ ಬಂದ್​: ಯಾದಗಿರಿಯಲ್ಲಿ ಸಹಜ ಜನಜೀವನ

ಯಾದಗಿರಿ: ರೈತರ ಸಾಲಮನ್ನಾಕ್ಕೆ ಆಗ್ರಹಿಸಿ ಬಿಜೆಪಿ ನೀಡಿರುವ ಕರ್ನಾಟಕ ಬಂದ್​ನ ಬಿಸಿ ಯಾದಗಿರಿಗೆ ತಟ್ಟಿಲ್ಲ. ಎಂದಿನಂತೆ ನಗರದಲ್ಲಿ ಬಸ್ ಸಂಚಾರ ಸಹಜವಾಗಿದ್ದು, ಜನಜೀವನವೂ ಸಹಜವಾಗಿದೆ.  ನಗರದಲ್ಲಿ ಎಲ್ಲಾ ಸಂಘಟನೆಗಳು, ಅಂಗಡಿಯವರು ರೈತರ ಪರವಾಗಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷರು ಹೇಳಿದ್ದು, ಸಂಪೂರ್ಣ ಬಂದ್​​ ಮಾಡುವ ವಿಶ್ವಾಸದಲ್ಲಿದ್ದಾರೆ.ಇಂದು ನಡೆಯಬೇಕಿದ್ದ ಪದವಿ ಪರೀಕ್ಷೆಗಳು ಎಂದಿನಂತೆ ನಡೆಯಲಿವೆ, ವಿದ್ಯಾರ್ಥಿಗಳಲ್ಲಿ ಯಾವುದೇ ಗೊಂದಲ ಬೇಡ ಎಂದು ಕಲಬುರ್ಗಿ ವಿ.ವಿ ಆಡಳಿತ ವಿಭಾಗೀಯ ಕುಲಸಚಿವ ಡಾ.ದಯಾನಂದ ಹೇಳಿದ್ದಾರೆ.