ಮೂರು ಭಾಷೆಯಲ್ಲಿ ಸರ್ಕಾರಕ್ಕೆ ತರಾಟೆ ತೆಗೆದುಕೊಂಡ 8ನೇ ತರಗತಿ ವಿದ್ಯಾರ್ಥಿನಿ

ದಾವಣಗೆರೆ: ಮೋಟಾರ್ ವಾಹನ ಮಸೂದೆ (ತಿದ್ದುಪಡಿ) ವಿರೋಧಿಸಿ ಹಾಗೂ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ಎರೆಡು ದಿನಗಳ ಬಂದ್​ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗಿದೆ. ದಾವಣಗೆರೆ ತಾಲೂಕಿನ ಕುಕ್ಕವಾಡ ಗ್ರಾಮದ ಮೌನಿಕ ಎಂಬ 8 ನೇ ತರಗತಿ ವಿದ್ಯಾರ್ಥಿನಿ ಇಂದು ಶಾಲೆಗೆ ಹೊರಟಿದ್ದಾಗ ಬಸ್ ಸಿಗದಿದ್ದಕ್ಕೆ ಅಸಮಾಧಾನ ಹೊರ ಹಾಕಿದ್ದಾರೆ. ಮೌನಿಕ  ಕಾರಿಗನೂರು ಕ್ರಾಸ್‌ನ ಶ್ರೀ ಮಾರುತಿ ಪ್ರೌಢಶಾಲೆಯಲ್ಲಿ 8ನೇ ತರಗತಿ ವ್ಯಾಸಂಗ ಮಾಡ್ತಿದ್ದಾರೆ. ಬಂದ್ ಮಾಡೋದ್ರಿಂದ ಏನೂ ಪ್ರಯೋಜನವಾಗಲ್ಲ ಅಂತಾ ಮೂರು ಭಾಷೆಯಲ್ಲಿ ವಿಡಿಯೋ ಮಾಡಿ ವಿದ್ಯಾರ್ಥಿನಿ ಹರಿಬಿಟ್ಟಿದ್ದಾರೆ.

‘ಕನ್ನಡ, ಇಂಗ್ಲಿಷ್, ಹಿಂದಿ’ ಭಾಷೆಯಲ್ಲಿ ಬಾಲಕಿ ಸರ್ಕಾರವನ್ನ ತರಾಟೆಗೆ ತೆಗೆದುಕೊಂಡಿದ್ದಾರೆ. ತಿಂಗಳಲ್ಲಿ ನಾಲ್ಕು ದಿನ ರಜೆ, ಹಬ್ಬ ಹರಿದಿನ ಅಂತ ರಜೆ, ಈ ಮಧ್ಯೆ ಬಂದ್ ಅಂತಾ ರಜೆ ಹೀಗೆ ರಜೆ ಮೇಲೆ ರಜೆ ಕೊಟ್ರೆ ನಾವ್ ಓದಿಕೊಳ್ಳೋದು ಹೇಗೆ ?

ಮೌನಿಕ, 8ನೇ ತರಗತಿ ವಿದ್ಯಾರ್ಥಿನಿ.

ಸದ್ಯ ವಿದ್ಯಾರ್ಥಿನಿಯ ಆಕ್ರೋಶದ‌ ನುಡಿಗಳು ವೈರಲ್ ಆಗಿವೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: conatct@firstnews.tv