ಬೆಂಗಳೂರಿನಲ್ಲಿ ಹಾಲಿನ ಹೊಳೆ, 100 ಕ್ಕೂ ಹೆಚ್ಚು ನಂದಿನಿ ಮಿಲ್ಕ್​​ ಪಾರ್ಲರ್ ಓಪನ್​

ಬೆಂಗಳೂರು: ಗ್ರಾಹಕರ ಅನುಕೂಲಕ್ಕಾಗಿ ಬೆಂಗಳೂರು ಹಾಲು ಒಕ್ಕೂಟ ನಗರದಲ್ಲಿ 100ಕ್ಕೂ ಹೆಚ್ಚು ನಂದಿನಿ ಮಿಲ್ಕ್​ ಪಾರ್ಲರ್​ಗಳನ್ನು ತೆರೆಯಲು ಮುಂದಾಗಿದೆ. ಹೊರ ರಾಜ್ಯದ ಹಾಲು ಒಕ್ಕೂಟಗಳಿಗೆ ಸಮರ್ಥ ಪೈಪೋಟಿ ನೀಡಲು ಹಾಗೂ ಬೆಂಗಳೂರಿನ ಜನರಿಗೆ ದಿನದ 24 ಗಂಟೆ ನಂದಿನಿ ಹಾಲು ಹಾಗೂ ಅದರ ಉತ್ಪನ್ನಗಳನ್ನ ಒದಗಿಸುವ ಸಲುವಾಗಿ ಈ ನಿರ್ಧಾರ ಕೈಗೊಂಡಿದೆ.

ಬಿ.ಜಿ. ಆಂಜಿನಪ್ಪ ಅಧ್ಯಕ್ಷರು ಬಮೂಲ್​​

ಬೆಂಗಳೂರು ವ್ಯಾಪ್ತಿಯಲ್ಲಿ ನಂದಿನಿ ಪಾರ್ಲರ್​ ತೆರೆಯಲು ಅವಕಾಶ ಕಲ್ಪಿಸಲಾಗಿದೆ. ಯಾರು ಬೇಕಾದರೂ ಇದಕ್ಕೆ ಅರ್ಜಿ ಹಾಕಬಹುದು. ಸ್ವಂತ ಕಟ್ಟಡ ಇರಬೇಕು,  ಇಲ್ಲದಿದ್ದರೆ ಬಾಡಿಗೆ ಪಡೆದವರು ಅಂಗಡಿಯ ಬಾಡಿಗೆ ಕರಾರು ಪತ್ರ ನೀಡಬೇಕು. ಒಂದು ಮಳಿಗೆಗೆ 50 ಸಾವಿರ ಡೆಪಾಸಿಟ್​ ಇಡಬೇಕು, 100 ಮಳಿಗೆಗೆ ಸೀಮಿತ ಅಂತೇನಿಲ್ಲ, ಬೇಡಿಕೆ ಅನುಸಾರ ನಾವು ಎಷ್ಟು ಬೇಕಾದ್ರು ನೀಡುತ್ತೇವೆ, ನಮಗೆ ಹೆಚ್ಚೆಚ್ಚು ಹಾಲು ಮಾರಾಟವಾಗಬೇಕು, ರೈತರಿಗೆ, ಮಾರಾಟಗಾರರಿಗೆ ಹಾಗೂ ಗ್ರಾಹಕರಿಗೆ ಅನುಕೂಲವಾಗಬೇಕು- ಬಿ.ಜಿ. ಆಂಜಿನಪ್ಪ, ಬೆಂಗಳೂರು  ಹಾಲು ಒಕ್ಕೂಟದ ಅಧ್ಯಕ್ಷರು

ಬಮೂಲ್​ ನಗರದ ಉತ್ತರಹಳ್ಳಿ, ಕನಕಪುರ ರಸ್ತೆ, ಆನೇಕಲ್​, ಜಯನಗರ, ಜೆಪಿ ನಗರ, ಬೆಳ್ಳಂದೂರು, ಸರ್ಜಾಪುರ, ಶಿವಾಜಿನಗರ ಸೇರಿದಂತೆ ಇತರ ಬಡಾವಣೆಗಳಲ್ಲಿ ಸುಮಾರು 1800 ಏಜೆಸ್ಸಿಗಳನ್ನು ಹೊಂದಿದೆ. ಆದರೆ ಬೆಂಗಳೂರಿನ ಬಹುತೇಕ ಬಡಾವಣೆಗಳಲ್ಲಿ ತಮಿಳುನಾಡು, ಆಂಧ್ರಪ್ರದೇಶ ಸೇರಿದಂತೆ ನೆರೆ ರಾಜ್ಯದ ಜನರೇ ಹೆಚ್ಚು ವಾಸವಾಗಿದ್ದಾರೆ. ಅವರಲ್ಲಿ ಬಹುತೇಕರು ಆಯಾ ರಾಜ್ಯದ ಹಾಲು ಖರೀದಿಸಿ ಬಳಸಲು ಆಸಕ್ತರಾಗಿದ್ದಾರೆ ಎಂಬುದು ಬಬೂಲ್​ ಸಮೀಕ್ಷಾ ವರದಿ ತಿಳಿಸಿತ್ತು. ಇದಕ್ಕೆ ಸಮರ್ಪಕ ಸಂಖ್ಯೆಯಲ್ಲಿ ನಂದಿನಿ ಪಾರ್ಲರ್​ಗಳು ಇಲ್ಲದಿರುವುದು ಕಾರಣವಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿತ್ತು. ಹೀಗಾಗಿ ಬಮೂಲ್​​​ ಹೊಸದಾಗಿ ಪಾರ್ಲರ್​ ತೆರೆಯಲು ಉದ್ದೇಶಿಸಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv