ನಗರಕ್ಕೆ ಸಮರ್ಪಕ ನೀರು ಪೊರೈಕೆಗೆ ಕ್ರಮ: ಸೋಮಶೇಖರ್​ ರೆಡ್ಡಿ

ಬಳ್ಳಾರಿ: ಜುಲೈಯವರೆಗೂ ನಗರಕ್ಕೆ ಕುಡಿಯುವ ನೀರಿನ ಸಮಸ್ಯೆ ಎದುರಾಗುವುದಿಲ್ಲವೆಂದು ಶಾಸಕ ಸೋಮಶೇಖರ್​ ರೆಡ್ಡಿ ತಿಳಿಸಿದ್ದಾರೆ. ನಗರಕ್ಕೆ ನೀರು ಪೂರೈಸುವ ಅಲ್ಲಿಪುರ ಕೆರೆಗೆ ಸೋಮಶೇಖರ ರೆಡ್ಡಿ ಭೇಟಿ ನೀಡಿ ಮಾತನಾಡಿದ ಅವರು ಟಿಬಿ ಬೋರ್ಡ್​ನಿಂದ ₹850 ಕೋಟಿ ಅನುದಾನದ ಯೋಜನೆಗೆ ಶೀಘ್ರದಲ್ಲೇ ಚಾಲನೆ ನೀಡಲಾಗುವುದು. ನಿರಂತರ ನೀರು ಯೋಜನೆ ಪೂರ್ಣಗೊಳಿಸಲು ಶೀಘ್ರದಲ್ಲೆ ಅಧಿಕಾರಿಗಳ ಸಭೆ ಕರೆಯುತ್ತೇನೆಂದು ತಿಳಿಸಿದರು. ಸದ್ಯ ಬಳ್ಳಾರಿ ನಗರಕ್ಕೆ 9 ದಿನಕ್ಕೊಮ್ಮೆ ನೀರು ಬಿಡಲಾಗುತ್ತಿದೆ. ಇನ್ಮುಂದೆ 5 ದಿನಕ್ಕೊಮ್ಮೆ ನೀರು ಬಿಡುವ ಗುರಿ ಇದೆ ಎಂದ ಅವರು ಕುಡಿಯುವ ನೀರಿನ ಸಮಸ್ಯೆಯ ಕುರಿತು ನಗರಾಭಿವೃದ್ಧಿ ಸಚಿವರೊಂದಿಗೆ ಚರ್ಚಿಸಲು ವರದಿ ಸಿದ್ಧಪಡಿಸಲಾಗುತ್ತಿದೆ. ಕುಡಿಯುವ ನೀರಿನ ಕೊರತೆಯನ್ನು ನೀಗಿಸಲು ನಗರ ನೀರು ಸರಬರಾಜು ಮಂಡಳಿ ಅಭಿಯಂತರರು ಕಾರ್ಯಪ್ರವೃತ್ತರಾಗಿದ್ದಾರೆ. ಮುಂದಿನ ದಿನಗಳಲ್ಲಿ ಬಳ್ಳಾರಿ ನಗರಕ್ಕೆ ನೀರಿನ ಸಮರ್ಪಕ ಸರಾಬರಾಜಿಗೆ ಮೊದಲ ಆದ್ಯತೆ ನೀಡುತ್ತೇನೆ ಎಂದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಕ್ಕಾಗಿ ಸಂಪರ್ಕಿಸಿ: contact@firstnews.tv