ಬಳ್ಳಾರಿಯಲ್ಲಿ ಬಸ್​ ಡಿಪೋಗೆ ಬೀಗ ಹಾಕಿ ಪ್ರತಿಭಟನೆ

ಬಳ್ಳಾರಿ: ಸಾಲಮನ್ನಾಗೆ ಆಗ್ರಹಿಸಿ ಬಿಜೆಪಿ ಕರ್ನಾಟಕ ಬಂದ್​ಗೆ ಕರೆ ನೀಡಿದ ಹಿನ್ನೆಲೆಯಲ್ಲಿ ಬಳ್ಳಾರಿ ನಗರದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಶಾಸಕ ಸೋಮಶೇಖರ್ ರೆಡ್ಡಿ ನೇತೃತ್ವದಲ್ಲಿ ಕಾರ್ಯಕರ್ತರು ಬೈಕ್​ ಱಲಿ ನಡೆಸಿದರು. ನಗರದ ರಾಯಲ್ ಸರ್ಕಲ್ ಬಳಿ ಟಯರ್​ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ ಸಾರಿಗೆ​ ಬಂದ್​ ಮಾಡಲು ಯತ್ನಿಸಿದರು. ಬಳ್ಳಾರಿಯ ಬಸ್​​ ಡಿಪೋಗೆ ಮುತ್ತಿಗೆ ಹಾಕಿ ಗೇಟ್​​​​ಗೆ ಬೀಗ ಹಾಕಿದರು. ಬಲವಂತವಾಗಿ ಅಂಗಡಿ, ಮುಂಗಟ್ಟುಗಳನ್ನು ಮುಚ್ಚಿಸಿದರು. ಈ ವೇಳೆ ಮಾತನಾಡಿದ ಶಾಸಕ ಸೋಮಶೇಖರ್​ ರೆಡ್ಡಿ ರೈತರಿಗಾಗಿ ಕೊನೆ ಉಸಿರು ಇರೋವರೆಗೂ ಹೋರಾಟ ಮಾಡಲಿದ್ದೇವೆ. ಸಾಲಮನ್ನಾ ವಿಚಾರದಲ್ಲಿ ಉಗ್ರ ಹೋರಾಟ ಕೈಗೊಂಡಿದ್ದೇವೆ, ಸಿದ್ದು ನ್ಯಾಮಗೌಡ ಅವರ ಆತ್ಮಕ್ಕೆ ಶಾಂತಿ ಸಿಗಬೇಕಾದ್ರೆ ರೈತರ ಸಾಲ ಮನ್ನಾ ಮಾಡಬೇಕು, ಇಂದಿನಿಂದ 24 ಗಂಟೆ ಕಾಲಾವಕಾಶ ಕೊಡಲಿದ್ದೇವೆ. ಅಷ್ಟರೊಳಗಾಗಿ ರೈತರ ಸಾಲ ಮನ್ನಾ ಮಾಡಬೇಕು, ಇಲ್ಲವಾದಲ್ಲಿ ಉಗ್ರ ಹೋರಾಟ ಮಾಡಲಾಗುವುದು ಅಂತಾ ಎಚ್ಚರಿಕೆ ನೀಡಿದ್ರು.

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv