ಉದ್ಘಾಟನ ಪಂದ್ಯದಲ್ಲಿ ಕಾಣಿಸಿಕೊಳ್ತಾರೆ ಬಾಲ್​​ಗರ್ಲ್ಸ್​​​​..!​

ಇಂದಿನಿಂದ 2018ರ ಫಿಫಾ ವರ್ಲ್ಡ್​ ಕಪ್​ ಆರಂಭವಾಗ್ತಾ ಇದೆ. ರಷ್ಯಾದಲ್ಲಿ ನಡೆಯುತ್ತಿರುವ ಟೂರ್ನಿಯ ಮೊದಲ ಪಂದ್ಯದಲ್ಲಿ, ಆತಿಥೇಯ ರಷ್ಯಾ ಹಾಗೂ ಸೌದಿ ಅರೇಬಿಯ ಎದುರಾಗುತ್ತಿದ್ದು ,ಉದ್ಘಾಟನ ಪಂದ್ಯಾಕ್ಕಾಗಿ ಮಾಸ್ಕೋ ಸಕಲ ರೀತಿಯಲ್ಲಿ ಸಜ್ಜಾಗಿದೆ.

ಇಲ್ಲಿ ಕಣಕ್ಕಿಳಿಯುತ್ತಿದ್ದಾರೆ ಬಾಲ್​ ಗರ್ಲ್ಸ್..!
ಸಹಜವಾಗಿ ಫುಟ್ಬಾಲ್​ ಪಂದ್ಯದ ವೇಳೆ ಆಟಗಾರರಿಗೆ ಚೆಂಡನ್ನು ತೆಗೆದು ಕೊಡೋದಕ್ಕೆಂದು ಬಾಲ್​ ಬಾಯ್​ಗಳು ಇರ್ತಾರೆ. ಆದ್ರೆ ಫಿಫಾ ವರ್ಲ್ಡ್​​ಕಪ್​ನ ಉದ್ಘಾಟನ ಪಂದ್ಯದಲ್ಲಿ ಬಾಲ್​ಬಾಯ್​​ಗಳ ಕೆಲಸವನ್ನ ಬಾಲ್​ಗರ್ಲ್​​​ಗಳು ಮಾಡ್ತಾರೆ. ವಿಶ್ವಕಪ್​ ಟೂರ್ನಿಯನ್ನು ರಂಗೇರಿಸುವ ಉದ್ದೇಶ ಹೊಂದಿರುವ ಆಯೋಜಕರು, ಈ ಕೆಲಸಕ್ಕಾಗಿ 14 ಸುಂದರ ಯುವತಿಯರನ್ನು ನೇಮಿಸಿದ್ದಾರೆ.

ರಂಗೇರಿಸಲಿದ್ದಾರೆ ಟೀನೇಜ್​ ಗರ್ಲ್ಸ್​​..!
64 ಪಂದ್ಯಗಳ ಫಿಫಾ ವರ್ಲ್ಡ್​​ಕಪ್​ ಟೂರ್ನಿಗಾಗಿ ಆಯೋಜಕರು, ಬರೋಬ್ಬರಿ 776 ಬಾಲ್​​​ ಬಾಯ್​ ಹಾಗೂ ಬಾಲ್​ ಗರ್ಲ್​​ಗಳನ್ನು ನೇಮಿಸಿದ್ದಾರೆ. ಆದರೆ ಓಪನಿಂಗ್​ ಮ್ಯಾಚ್​ನಲ್ಲಿ ಗರ್ಲ್ಸ್​ ಮಾತ್ರ ಕಾಣಿಸಿಕೊಳ್ತಾರೆ. ಇದೇ ಮೊದಲ ಬಾರಿಗೆ ಇತಂಹದ್ದೊಂದು ಪ್ರಯೋಗಕ್ಕೆ ಆಯೋಜಕರು ತಯಾರಾಗಿದ್ದು, 14 ಸದಸ್ಯರ ಟೀನೇಜ್​ ಗರ್ಲ್ಸ್​​ ಗ್ರೂಪ್​ ಒಂದು ಬಾಲ್​ ಗರ್ಲ್​​ಗಳ ಕೆಲಸವನ್ನು ನಿರ್ವಹಿಸುವುದರ ಜೊತೆಗೆ ಫಿಫಾ ವರ್ಲ್ಡ್​​ಕಪ್​​​ ಶೋ ಪೀಸ್​ಗಾಳಾಗಿದ್ದಾರೆ.​​

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv