ಕೈ ಕೊಟ್ಟ ಕಾಂಗ್ರೆಸ್: ಕಮಲದ ಕಡೆಗೆ ವಾಲಿದ ಬಲರಾಂ

ಬೆಂಗಳೂರು: ಕಾಂಗ್ರೆಸ್‌ನ 218 ಕ್ಷೇತ್ರಗಳ ಅಭ್ಯರ್ಥಿಗಳು ಅನೌನ್ಸ್‌ ಆದ ಮೇಲೆ ಟಿಕೆಟ್ ಸಿಗದ ಆಕಾಂಕ್ಷಿಗಳು ಬೇರೆ ಪಕ್ಷಗಳತ್ತ ಮುಖ ಮಾಡಿದ್ದು, ಇದರ ಮುಂದುವರಿದ ಭಾಗವಾಗಿ ಇಬ್ಬರು ಕಾಂಗ್ರೆಸ್ ಮುಖಂಡರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಸಮ್ಮುಖದಲ್ಲಿ ಮುಳಬಾಗಿಲು ಮಾಜಿ ಶಾಸಕ ಅಮರೇಶ್‌, ಹಾಗೂ ಮಾಜಿ ಐಎಎಸ್ ಅಧಿಕಾರಿ ಜಿ.ವಿ.ಬಲರಾಂ ಕೈ ತೊರೆದು ಕಮಲವನ್ನು ಹಿಡಿದಿದ್ದಾರೆ.

ಜಿ.ವಿ. ಬಲರಾಂ ಪಾವಗಡ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಇನ್ನೂ ಈ ಬಗ್ಗೆ ಮಾತನಾಡಿದ ಬಿಎಸ್‌ವೈ ಬಲರಾಂರಿಗೆ ಟಿಕೆಟ್ ಕೊಡಿಸಲು ಶ್ರಮಿಸುತ್ತೇನೆ ಅಂತಾ ಹೇಳಿದರು. ಬಿಜೆಪಿ ಅಭ್ಯರ್ಥಿಗಳ ಎರಡು ಪಟ್ಟಿ ಪ್ರಕಟವಾಗಿದೆಯಾದ್ರೂ ಪಾವಗಡಕ್ಕೆ ಯಾರನ್ನೂ ಅಂತಿಮಗೊಳಿಸಲಾಗಿಲ್ಲ.

Leave a Reply

Your email address will not be published. Required fields are marked *