ಬಾಲಾಕೋಟ್ ಏರ್ ಸ್ಟ್ರೈಕ್ ಸುಳ್ಳು, ಒಬ್ಬನೂ ಸತ್ತಿಲ್ಲ: ಚಂದ್ರಬಾಬು ನಾಯ್ಡು

ಮಂಡ್ಯ: ಬಾಲಾಕೋಟ್ ಏರ್ ಸ್ಟ್ರೈಕ್ ಸುಳ್ಳು, ಒಬ್ಬನೂ ಸತ್ತಿಲ್ಲ. ಪ್ರಧಾನಿ ಮೋದಿ, ಪಾಕ್ ಪಿಎಂ ಇಬ್ಬರೂ ಒಂದೇ, ಇದನ್ನ ಹೇಳಿದ್ರೆ ನಮ್ಮನ್ನ ಆ್ಯಂಟಿನ್ಯಾಷನಲ್ ಅಂತಾ ಕರೆಯಲಾಗುತ್ತೆ ಅಂತಾ ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಹೇಳಿದ್ದಾರೆ.

ಜಿಲ್ಲೆಯ ಪಾಂಡವಪುರದಲ್ಲಿ  ನಡೆದ ಮೈತ್ರಿ ಸಮಾವೇಶದಲ್ಲಿ ಮಾತನಾಡಿದ ಚಂದ್ರಬಾಬು ನಾಯ್ಡು, ಮೋದಿ ಮಾಡಲ್ ಹೆಸರಿನಲ್ಲಿ ಜನ್ರಿಗೆ ಕಳೆದ ಬಾರಿ ಮೋಸ ಮಾಡಿದ್ದಾರೆ. ಕೇಂದ್ರದಲ್ಲಿ ಬಿಜೆಪಿಯೇತರ ಸರ್ಕಾರ ಅಧಿಕಾರಕ್ಕೆ ಬರೋದು ಸತ್ಯ,‌ ನರೇಂದ್ರ ಮೋದಿ ಗುಜರಾತ್‌ಗೆ ವಾಪಸ್ ಹೋಗೋದು ಅಷ್ಟೇ ಸತ್ಯ.  ಕೇಂದ್ರ ಸರ್ಕಾರದಿಂದ ಐಟಿ, ಈಡಿಯನ್ನ ಸಂಪೂರ್ಣವಾಗಿ ದುರ್ಬಳಕೆ ಮಾಡಿಕೊಳ್ಳಲಾಗ್ತಿದೆ. ಇನ್‌ಫಾರ್ಮೇಷನ್ ಟೆಕ್ನಾಲಜಿಯಲ್ಲಿ ಬೆಂಗಳೂರು ಮುಂದಿದೆ. ಪ್ರಧಾನಿ‌ ನರೇಂದ್ರ ಮೋದಿ ಈವರೆಗೂ ಒಂದೇ ಒಂದು ಸುದ್ದಿಗೋಷ್ಠಿ ಮಾಡಿಲ್ಲ. 2019ರ ಲೋಕಸಭಾ ಚುನಾವಣೆ ಅತಿ ಮುಖ್ಯವಾದ ಚುನಾವಣೆ. ಪ್ರಜಾಪ್ರಭುತ್ವ ತತ್ವದಡಿ ಮೋದಿ ಚುನಾವಣೆ ಎದುರಿಸುತ್ತಿಲ್ಲ. ಸಿಬಿಐ, ಈಡಿ, ಐಟಿ ಮೂಲಕ ಪ್ರತಿಪಕ್ಷಗಳನ್ನ ಹೆದರಿಸುವ ತಂತ್ರ. ಇವಿಎಂ ಬಗ್ಗೆ ನಮಗೆ ವಿಶ್ವಾಸವಿಲ್ಲ. ಮತದಾನದ ಬಳಿಕ ವಿವಿ ಪ್ಯಾಟ್ ಪರಿಶೀಲಿಸಿ ಅಂದರು. ಇನ್ನು ಮುಖ್ಯವಾಗಿ ಪಾಕಿಸ್ತಾನ ಪಿಎಂ ಕೂಡ ಮೋದಿ ಮತ್ತೊಮ್ಮೆ ಪಿಎಂ ಆಗಲಿ ಅಂತಿದ್ದಾರೆ. ಇಂಡಿಯನ್ ಪಿಎಂ, ಪಾಕ್ ಪಿಎಂ ಇಬ್ಬರೂ ಡರ್ಟಿ ಪಾಲಿಟಿಕ್ಸ್ ಮಾಡ್ತಿದ್ದಾರೆ. ನಾವು ಇದನ್ನ ಹೇಳಿದ್ರೆ ದೇಶ ವಿರೋಧಿಗಳು ಅಂತಾರೆ. ಪ್ರತಿಯೊಬ್ಬರು ಬಿಜೆಪಿ ವಿರುದ್ಧ ಮತ ಚಲಾಯಿಸಿ ಕೋಮುವಾದಿಯನ್ನ ಕಿತ್ತೊಗೆಯಿರಿ ಅಂತಾ  ಚಂದ್ರಬಾಬು ನಾಯ್ಡು ಕರೆಕೊಟ್ರು.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv