‘ರಮೇಶ್​ ಯಾರ ಬಳಿಯೂ ಒಂದು ರೂಪಾಯಿ ಪಡೆದಿಲ್ಲ’ ಬಾಲಚಂದ್ರ ಜಾರಕಿಹೊಳಿ ಹೇಳಿಕೆ

ಬೆಳಗಾವಿ: ರಮೇಶ್​  ಜಾರಕಿಹೊಳಿ ಯಾರ ಬಳಿ ಒಂದು ರೂಪಾಯಿ ಪಡೆದಿಲ್ಲ. ಅವರು ಬೇರೆ ಬೇರೆ ಕಾರಣಗಳಿಂದ​ ಕಾಂಗ್ರೆಸ್ ಬಿಡಲು ನಿರ್ಧಿಸಿದ್ದಾರೆ ಎಂದು ಅವರ ಸಹೋದರ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ  ಹೇಳಿದ್ದಾರೆ.

ನಗರದಲ್ಲಿ ಮತದಾನ ಮಾಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಬಾಲಚಂದ್ರ ಜಾರಕಿಹೊಳಿ, ದೇಶದಲ್ಲಿ ಬಿಜೆಪಿ ಅಲೆಯಿದ್ದು, ಮತ್ತೊಮ್ಮೆ  ಮೋದಿ ಪ್ರಧಾನಿ ಆಗ್ತಾರೆ. ಸಂಸದ ಸುರೇಶ ಅಂಗಡಿ ಜಾತಕ ಬಲ ಚೆನ್ನಾಗಿದೆ. ನಾವು ಮೊದಲಿನಿಂದಲೂ ದೈವ ಭಕ್ತರು. ಲೋಕಸಭೆ ‌ಚುನಾವಣೆ ಫಲಿತಾಂಶ ಬಂದ ಬಳಿಕ ರಾಜಕೀಯದಲ್ಲಿ ಬಹಳ ಬದಲಾವಣೆ ಅಗಲಿದೆ. ರಮೇಶ್ ಜಾರಕಿಹೊಳಿ ಕಾಂಗ್ರೆಸ್ ಪಕ್ಷದಿಂದ ಒಂದು ಹೆಜ್ಜೆ ದೂರ ಇಟ್ಟಿದ್ದಾರೆ ಎಂದರು.

ಇನ್ನು ಕುಟುಂಬ‌ ವಿಚಾರ ಬಂದಾಗ ನಾವು  ಜಾರಕಿಹೊಳಿ  ಸಹೋದರರೆಲ್ಲ ಒಂದೇ. ಆದ್ರೆ ರಾಜಕೀಯಕ್ಕೆ ಬಂದಾಗ ನಮ್ಮ ನಿರ್ಧಾರಗಳು ಬೇರೆ ಬೇರೆ. ಕುಟುಂಬ ವಿಚಾರ ಬಂದಾಗ ಎಲ್ಲರೂ ಕುಳಿತ ಮಾತನಾಡೋದು ಒಳ್ಳೆಯದು. ನಮ್ಮ ಸಹೋದರರ ವಿವಾದ ಇತ್ಯರ್ಥ ಮಾಡೋಕೆ ನಾನು ಮಧ್ಯಸ್ಥಿಕೆ ವಹಿಸಲು ಸಿದ್ಧ. ರಮೇಶ್, ಸತೀಶ್ ಇಬ್ಬರು ನನಗಿಂತ  ದೊಡ್ಡವರು. ಅವರಿಬ್ಬರು ಸಮಸ್ಯೆಯನ್ನು ಕುಳಿತು ಮಾತಾಡಿ ಇತ್ಯರ್ಥ ಪಡಿಸಿಕೊಳ್ಳಬೇಕು. ಅವರಿಬ್ಬರು ಒಂದಾದ್ರೆ ರಾಜ್ಯದಲ್ಲಿ ಉತ್ತಮ ರಾಜಕೀಯ ಶಕ್ತಿಯಾಗಲಿದ್ದಾರೆ ಎಂದು ಇದೆ ವೇಳೆ ಬಾಲಚಂದ್ರ ಜಾರಕಿಹೊಳಿ ಹೇಳಿದ್ರು.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv