ಭೀಮಾತೀರದ ನಕಲಿ ಎನ್ಕೌಂಟರ್ ಪ್ರಕರಣ, 4 ಪೊಲೀಸರಿಗೆ ಜಾಮೀನು

ವಿಜಯಪುರ: ಭೀಮಾತೀರದ ಚಡಚಣ ಸಹೋದರರ ನಿಗೂಢ ಕೊಲೆ ಹಾಗು ನಕಲಿ ಎನ್ಕೌಂಟರ್ ಪ್ರಕರಣದ ಆರೋಪಿಗಳಾದ ಚಡಚಣ ಪಿಎಸ್ಐ ಸೇರಿ ಮೂವರು ಪೊಲೀಸ್ ಪೇದೆಗಳಿಗೆ ಜಾಮೀನು ಮಂಜೂರಾಗಿದೆ. ಚಡಚಣದ ಅಂದಿನ ಪಿಎಸ್ಐ ಗೋಪಾಲ್ ಹಳ್ಳೂರ್, ಪೇದೆಗಳಾದ ಸತ್ಯಪ್ಪ ನಾಯ್ಕೊಡಿ, ಸಿದ್ದಾರೂಢ ರೂಗಿ, ಚಂದ್ರಶೇಖರ ಜಾಧವ್​ಗೆ ಜಾಮೀನು ಮಂಜೂರಾಗಿದೆ. ಗಂಗಾಧರ ಚಡಚಣ ನಿಗೂಢ ಹತ್ಯೆ ಹಾಗೂ ಧರ್ಮರಾಜ ಚಡಚಣ ನಕಲಿ ಎನ್ಕೌಂಟರ್ ಪ್ರಕರಣಗಳಲ್ಲಿ ಆರೋಪಿಗಳನ್ನು ಪೊಲೀಸ್​ ವಶಕ್ಕೆ ಪಡೆಯಲಾಗಿತ್ತು. ಇಂದು ಆರೋಪಿಗಳ ಪರ ವಕೀಲರಾದ ರವಿ ನಾಯಕ್, ಆರ್.ಎಸ್ ಲಗಳಿ ವಾದ ಮಂಡಿಸಿದ್ರು. ವಾದ ಹಾಗೂ ಪ್ರತಿವಾದ ಬಳಿಕ ಕಲಬುರ್ಗಿ ಹೈಕೋರ್ಟ್ ಪೀಠದ ನ್ಯಾಯಾಧೀಶ ಕೆ. ಸೋಮಶೇಖರ್ ಜಾಮೀನು ಮಂಜೂರು ಮಾಡಿ ಆದೇಶಿಸಿದ್ದಾರೆ.