ಮಣಭಾರದ ಸ್ಕೂಲ್‌ ಬ್ಯಾಗ್‌, ನಿಮ್ಮ ಮಕ್ಕಳನ್ನ ಆಸ್ಪತ್ರೆ ಸೇರಿಸುತ್ತೆ.. ಎಚ್ಚರ..!

ಬೇಸಿಗೆ ರಜೆ ಮುಗಿತಾ ಇದೆ. ಇನ್ನೇನು ಶಾಲೆಗಳು ಪ್ರಾರಂಭವಾಗುತ್ತೆ. ಅಷ್ಟೇ ಅಲ್ಲ ಮಕ್ಕಳ ಕಣ್ಣಲ್ಲಿ ನೀರೂ ಸ್ಟಾರ್ಟ್​ ಆಗುತ್ತೆ. ಮಣಭಾರದ ಬ್ಯಾಗ್‌ ಹೊತ್ಕೊಂಡು ಸ್ಕೂಲ್​ಗೆ ಹೋಗೋದ್​ ಅಂದ್ರೆ ಮಕ್ಕಳಿಗೆ ಕಷ್ಟ ಅಲ್ವಾ? ಹೆಚ್ಚು ಓದ್ಲಿ ಒಳ್ಳೆ ಮಾರ್ಕ್ಸ್​ ತೆಗೆದುಕೊಳ್ಳಲಿ ಅಂತ ರಾಶಿ ರಾಶಿ ಬುಕ್ಸ್‌ ಕೊಟ್ಟು ಸ್ಕೂಲ್‌ಗೆ ಕಳುಹಿಸಿದ್ರೆ , ನಿಮ್ಮ ಮಕ್ಕಳು ಆಸ್ಪತ್ರೆ ಸೇರಬೇಕಾಗುತ್ತೆ. ಕಾರಣ ಅವರು ಬಳಸುವ ಬ್ಯಾಗ್​ಗಳು. ಮಕ್ಕಳಿಗೆ ಬ್ಯಾಗ್​ಗಳಿಂದಲೇ ತೊಂದರೆಯುಂಟಾಗುತ್ತೆ ಅಂತ ನ್ಯೂರಾಲಜಿ ತಜ್ಞರು ಹೇಳ್ತಾರೆ. ಭಾರದ ಬ್ಯಾಗ್‌ ಹೊರೋದ್ರಿಂದ ಏನೆಲ್ಲಾ ಸಮಸ್ಯೆ ಆಗಬಹುದು ಗೊತ್ತಾ..?

ಹಿಂಗೆಲ್ಲಾ ಆಗ್ಬಿಡುತ್ತೆ ಹುಷಾರು..!
ಕತ್ತು ನೋವು ಕಾಡಬಹುದು
ಬೆನ್ನು ನೋವು ಶುರುವಾಗಬಹುದು
ಸೊಂಟ ನೋವು ಶುರುವಾದ್ರೂ ಅಚ್ಚರಿಯಿಲ್ಲ
ಕೈ ಕಾಲು ನೋವು ಖಂಡಿತಾ ಬರುತ್ತೆ
ಸ್ಪೈನಲ್​ ಕಾರ್ಡ್​ ಸಮಸ್ಯೆನೂ ಶುರುವಾಗುತ್ತೆ

ಇಷ್ಟೆಲ್ಲಾ ಸಮಸ್ಯೆ ಆಗುತ್ತೆ ಅಂದಮೇಲೆ ನಿಮ್ಮ ಮಕ್ಕಳ ಸ್ಕೂಲ್‌ ಬ್ಯಾಗ್‌ ಬಗ್ಗೆ ನೀವು ಗಮನ ವಹಿಸಲೇಬೇಕು. ಮಕ್ಕಳ ಮೇಲೆ ಭಾರ ಹೆಚ್ಚಾಗದಂತೆ ಕ್ರಮ ಕೈಗೊಳ್ಳಲೇಬೇಕು. ಹಾಗಿದ್ರೆ ಪೋಷಕರು ಏನೆಲ್ಲಾ ಮಾಡ್ಬೇಕು. ಹೇಳ್ತೀವಿ ಕೇಳಿ.

ಹೀಗೆ ಮಾಡಿದ್ರೆ ಮಾತ್ರ ನಿಮ್ಮ ಮಕ್ಕಳ ಆರೋಗ್ಯ ಸೇಫ್‌..!
ಭುಜಕ್ಕೆ ಹಾಕೋ ಬ್ಯಾಗ್‌ಗಿಂತ ಬೆನ್ನಿಗೆ ಹಾಕಿಕೊಳ್ಳೋ ಬ್ಯಾಗ್ ಉತ್ತಮ
2 ಪಟ್ಟಿಗಳನ್ನ ಹೊಂದಿರುವುದರಿಂದ ಸಮವಾಗಿ ಭಾರ ಡಿವೈಡ್ ಆಗತ್ತೆ
ಪಟ್ಟಿಗಳು ಎರಡು ಭುಜದ ಮೇಲೆ ಸರಿಯಾಗಿ ಕೂರುವಂತೆ ದಪ್ಪವಾಗಿರಬೇಕು
ಬ್ಯಾಗ್‌ನ ಎತ್ತರ ಮಗುವಿನ ಸೊಂಟದ ಕೆಳಗಿನ 4 ಇಂಚಿಗಿಂತ ಜಾಸ್ತಿ ಇರಬಾರದು
ಬ್ಯಾಗ್ ಸೆಲೆಕ್ಟ್ ಮಾಡುವಾಗ ಸೊಂಟದ ಬೆಲ್ಟ್ ಇರುವ ಬ್ಯಾಗ್ ತೆಗೆದುಕೊಳ್ಳಿ
ಬ್ಯಾಗ್ ಪಟ್ಟಿಗಳನ್ನು ಸಮವಾಗಿ ಜೋಡಿಸುವುದರ ಬಗ್ಗೆ ಗಮನ ಕೊಡುವುದು
ಚಕ್ರಗಳುಳ್ಳ ಟ್ರಾಲಿ ಬ್ಯಾಗ್‌ಗಳನ್ನ ಮಕ್ಕಳಿಗೆ ಕೊಡಿಸುವುದು ಉತ್ತಮ
ಭಾರವಾದ ಪುಸ್ತಕಗಳನ್ನ ಬ್ಯಾಗ್​ನ ಹಿಂಬದಿಗೆ ಇಡೋದ್ರಿಂದ ಭಾರ ಬೀಳೋದಿಲ್ಲ
ಅನಗತ್ಯವಾಗಿ ನೋಟ್ ಬುಕ್ ಬದಲು ವರ್ಕ್ ಶೀಟ್ ಬಳಸೋದು ಉತ್ತಮ
ಮಕ್ಕಳು ಮನೆ ಮತ್ತು ಶಾಲೆಯಲ್ಲಿ ಕೂರುವ ಭಂಗಿ ಬಗ್ಗೆ ಎಚ್ಚರ ವಹಿಸಬೇಕು

ಇಷ್ಟೆಲ್ಲಾ ಪ್ರಿಕಾಶನರಿ ಮೆಶರ್ಸ್‌ನ ಪೋಷಕರು ಪರಿಗಣಿಸಿದ್ರೆ ಮಾತ್ರ ನಿಮ್ಮ ಮಕ್ಕಳ ಆರೋಗ್ಯ ಸೇಫಾಗಿರುತ್ತೆ. ನಿಮ್ಮ ಮಕ್ಕಳು ಖುಷಿಖುಷಿಯಾಗೇ ಸ್ಕೂಲ್‌ಗೆ ಹೋಗ್ತಾರೆ. ಎಚ್ಚರಿಕೆ ವಹಿಸದೇ ಇದ್ರೆ ಆಸ್ಪತ್ರೆ ಸೇರ್ತಾರೆ.

ವಿಶೇಷ ಬರಹ – ಪವಿತ್ರ

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಕ್ಕಾಗಿ ಸಂಪರ್ಕಿಸಿ: contact@firstnews.tv