ಬಾರ್​ನಲ್ಲಿ ಎಣ್ಣೆ ಹೊಡೆಯುತ್ತಾ, ಸರಕಾರಿ ಡಿಡಿ ಬರೀತಿದ್ದ ಯುವಕನಿಗೆ ಧರ್ಮದೇಟು

ಬಾಗಲಕೋಟೆ: ಸರಕಾರಿ ಕೆಲಸ ದೇವರ ಕೆಲಸ. ಆದರೆ ಅದನ್ನು ಬಾರ್‌ನಲ್ಲಿ ಮಾಡಿದರೆ ಹೇಗೆ? ಹೌದು ಇಲ್ಲೊಬ್ಬ ಯುವಕ  ಬಾರ್‌ನಲ್ಲಿ ಶರ್ಟ್‌ ಬಿಚ್ಚಿಹಾಕಿ, ಡಿಡಿ ಬಿಲ್‌ ಬರೆಯುತ್ತಿದ್ದ. ಇದನ್ನ ಕಂಡು ಕಿಡಿಕಾರಿದ ಬಿಜೆಪಿ ಕಾರ್ಯಕರ್ತರು ಖಾಸಗಿ ಕಂಪನಿಯ ಸದರಿ ನೌಕರನಿಗೆ ಮಂಗಳಾರತಿ ಮಾಡಿದ್ದಾರೆ. ಇದು ನಡೆದಿದ್ದು ಬಾಗಲಕೋಟೆ ನಗರದ ಖಾಸಗಿ ಹೋಟೆಲ್‌ನಲ್ಲಿ. ಖಾಸಗಿ ಕಂಪನಿಯ ನೌಕರ ಮಂಜುನಾಥ್‌ ಫತ್ತೇಪುರ ಎಂಬ ವ್ಯಕ್ತಿ ಹೀಗೆ ಒಂದು ಕೈಯಲ್ಲಿ ಬಾಟಲ್‌, ಮತ್ತೊಂದು ಕೈಯಲ್ಲಿ ಡಿಡಿ ಬಿಲ್ ಬುಕ್‌ ಹಿಡಿದು ಬರೆಯುತ್ತಿದ್ದ.

ಈ ವೇಳೆ ಅನುಮಾನಗೊಂಡು ಸ್ಥಳೀಯರು ಹಾಗೂ ಬಿಜೆಪಿ ಕಾರ್ಯಕರ್ತರು ಪ್ರಶ್ನೆ ಮಾಡಿದ್ದಕ್ಕೆ ತಿರುಗಿ ಅವಾಜ್‌ ಹಾಕಿದ್ದಾನೆ.
ಇದರಿಂದ ಕೋಪಗೊಂಡ ಅವರು ಆತನನ್ನು ಬಾರ್‌ನಿಂದ ಹೊರ ಕರೆತಂದು ಥಳಿಸಿದ್ದಾರೆ. ಆತನ ಬಳಿ ಇದ್ದ 500ಕ್ಕೂ ಹೆಚ್ಚು ಡಿಡಿಗಳನ್ನು ವಶಪಡಿಸಿಕೊಂಡಿದ್ದಾರೆ.

ಆ ಎಲ್ಲ ಡಿಡಿಗಳು ತೋಟಗಾರಿಕೆ ಹಾಗೂ ಕೃಷಿ ಇಲಾಖೆಗೆ ನೀಡಲಾಗಿರುವ ತಾಡ್‌ಪಾಲ್‌ಗಳ ಬಿಲ್‌ ಅಂತಾ ತಿಳಿದು ಬಂದಿದೆ. ಕೃಷಿ ಭಾಗ್ಯ ಯೋಜನೆ ಅಡಿ ವಿತರಿಸಲಾಗುವ ತಾಡಪಾಲ್‌ಗಳಲ್ಲಿ ಗೋಲ್‌ ಮಾಲ್ ನಡೆದಿದೆ ಅನ್ನೋ ಆರೋಪ ಕೇಳಿ ಬಂದಿದೆ. ಸದ್ಯ ಬಿಜೆಪಿ ಕಾರ್ಯರ್ತರು ಆತನನ್ನ ನಗರ ಠಾಣೆ ಪೊಲೀಸರಿಗೆ ಒಪ್ಪಿಸಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv