ನನ್ ಮಗಂದ್! ಕೃಷಿ ಶಿಕ್ಷಣ ಖಾಸಗೀಕರಣ ಬಂದ್ ಆಗ್ಬೇಕ್’

ಬಾಗಲಕೋಟೆ: ಕೃಷಿ ಹಾಗೂ ತೋಟಗಾರಿಕಾ ಶಿಕ್ಷಣದ ಖಾಸಗೀಕರಣ ವಿರೋಧಿಸಿ ವಿದ್ಯಾರ್ಥಿಗಳು ನಗರದ ಹೊರವಲಯದಲ್ಲಿರುವ ತೋಟಗಾರಿಕಾ ವಿಶ್ವವಿದ್ಯಾಲಯ ಎದುರು ಪ್ರತಿಭಟನೆ ನಡೆಸಿದರು.
ಕೃಷಿ ಕ್ಷೇತ್ರದ ಶಿಕ್ಷಣ ಖಾಸಗೀಕರಣ ವಿರೋಧಿಸಿ ಸರ್ಕಾರದ ವಿರುದ್ಧ ವಿನೂತನ ಘೋಷಣೆಗಳನ್ನು ಕೂಗಿ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ಹುಚ್ಚಾ ವೆಂಕಟ್ ಡೈಲಾಗ್ ಅನುಕರಣೆ ಮಾಡಿದ ವಿದ್ಯಾರ್ಥಿಗಳು “ನನ್ ಮಗಂದ್ ಬ್ಯಾನ್ ಆಗ್ಬೇಕ್” “ರೈಟೆಕ್ ಬಂದ್ ಆಗ್ಬೇಕ್” ಎಂದು ಘೋಷಣೆ ಕೊಗುತ್ತಾ, ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ನ್ಯಾಯ ನ್ಯಾಯ ಅಂತೀರಿ ಹೊಟ್ಟೆಗೇನ್ ತಿಂತೀರಿ ಎಂದು ಪ್ರಶ್ನಿಸುತ್ತಾ ವಿದ್ಯಾರ್ಥಿಗಳು, ಶಿಕ್ಷಣ ಇಲಾಖೆಯ ಕ್ರಮ ಖಂಡಿಸಿ ಅನಿರ್ಧಿಷ್ಟಾವಧಿ ಕಾಲ ಪ್ರತಿಭಟನೆ ಕೈಗೊಂಡಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ:contact@firstnews.tv