ಫೈನಲ್​ನಲ್ಲಿ ಸೈನಾ ವಿರುದ್ಧ ಪರಾಭವಗೊಂಡ ಪಿ.ವಿ ಸಿಂಧು..!

ಬ್ಯಾಡ್ಮಿಂಟನ್ ಸ್ಟಾರ್ ಸೈನಾ ನೆಹ್ವಾಲ್, ಸೀನಿಯರ್ ಬ್ಯಾಡ್ಮಿಂಟನ್​ ಚಾಂಪಿಯಷಿಪ್​ ಟೂರ್ನಿಯ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಇಂದು ನಡೆದ ಫೈನಲ್ ಕಾದಾಟದಲ್ಲಿ ಸೈನಾ, ಭಾರತದ ಒಲಿಂಪಿಕ್ ಪದಕ ವಿಜೇತೆ ಪಿ.ವಿ ಸಿಂಧು ಅವರನ್ನ 21-18, 21-15 ಅಂತರದಿಂದ ಮಣಿಸಿದ್ದಾರೆ. ಈ ಮೂಲಕ ನಾಲ್ಕನೇ ಬಾರಿ ಸೀನಿಯರ್ ಟೈಟಲ್ ಗೆದ್ದುಕೊಂಡ್ರು. 2017ರ ಚಾಂಪಿಯನ್​ಷಿಪ್​ನಲ್ಲು ಸೈನಾ ಸಿಂಧು ವಿರುದ್ಧ ಗೆಲುವು ಸಾಧಿಸಿದ್ರು.