ಬದಾಮಿ ಶಾಸಕ ಸಿದ್ದರಾಮಯ್ಯನವರ 3 ತಾಜಾ ಬೇಡಿಕೆಗಳೇನು ..!?

ಬಾಗಲಕೋಟೆ: ಬದಾಮಿ ಶಾಸಕ, ಮಾಜಿ ಸಿಎಂ ಸಿದ್ದರಾಮಯ್ಯ ಸರ್ಕಾರದೊಂದಿಗೆ ಪತ್ರ ವ್ಯವಹಾರ ಮುಂದುವರೆಸಿದ್ದಾರೆ. ಐತಿಹಾಸಿಕ ಬದಾಮಿ ನಗರಕ್ಕೆ ಸರ್ಕಾರಿ ತಾಂತ್ರಿಕ ಮಹಾವಿದ್ಯಾಲಯವನ್ನು ಮಂಜೂರು ಮಾಡುವಂತೆ, ಹಾಗೂ ಬದಾಮಿಯ ಕೆರೂರು ನಗರಕ್ಕೆ ಸರ್ಕಾರಿ ಐಟಿಐ ಕಾಲೇಜು ಕೋರಿ ಮತ್ತು ಗುಳೇದಗುಡ್ಡ ನಗರಕ್ಕೆ ಪಶು ವೈದ್ಯಕೀಯ ಕಾಲೇಜು ಕೋರಿ ಮೂರು ಪ್ರತ್ಯೇಕ ಮನವಿ ಪತ್ರಗಳನ್ನ ಬರೆದಿದ್ದಾರೆ. ಆ ಮೂಲಕ ಸರ್ಕಾರಕ್ಕೆ ಮೂರು ಪ್ರತ್ಯೇಕ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ. ಸರ್ಕಾರಿ ಐಟಿಐ ಕಾಲೇಜು ಮಂಜೂರಾತಿ ಸಂಬಂಧ ಕಾರ್ಮಿಕ ಸಚಿವ ವೆಂಕಟರಮಣಪ್ಪಗೆ ಪತ್ರ ಬರೆದಿದ್ದಾರೆ. ಪಶು ವೈದ್ಯಕೀಯ ಕಾಲೇಜು, ಮತ್ತು ತಾಂತ್ರಿಕ ಮಹಾವಿದ್ಯಾಲಯ ಮಂಜೂರಾತಿಗಾಗಿ ನೇರವಾಗಿ ಮುಖ್ಯಮಂತ್ರಿಗೆ ಮನವಿ ಪತ್ರ ಬರೆದಿದ್ದಾರೆ. ಒಟ್ಟಾರೆ ಬದಾಮಿ ಶಾಸಕ ಸಿದ್ದರಾಮಯ್ಯನವರು ಈ ವರೆಗೂ ಸರ್ಕಾರಕ್ಕೆ ಎಂಟು ಮನವಿ ಪತ್ರಗಳನ್ನು ಬರೆದಿದ್ದಾರೆ.

 

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv